ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯಮಾಪನ ಲೋಪ: ಗರಿಷ್ಠ ಅಂಕಕ್ಕಿಂತಲೂ ಹೆಚ್ಚು ಅಂಕ

ವಿದ್ಯಾರ್ಥಿಗಳ ಆಕ್ರೋಶ
Last Updated 24 ಜನವರಿ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲ ಯವು ಬಿ.ಕಾಂ. ಮೂರನೇ ಸೆಮಿಸ್ಟರ್‌ನ ವಿವಿಧ ವಿಷಯಗಳ ಪರೀಕ್ಷೆಯಲ್ಲಿ ನಿಗದಿಪಡಿಸಿದ್ದ ಗರಿಷ್ಠ ಅಂಕಗಳಿಗಿಂತಲೂ ಹೆಚ್ಚು ಅಂಕಗಳನ್ನು ನೀಡಿದೆ.

ಬಿ.ಕಾಂ. ಮೂರನೇ ಸೆಮಿಸ್ಟರ್‌ನ ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯವು ನಡೆಸಿದ ಮೌಲ್ಯಮಾಪನ ಕಾರ್ಯದ ಬಗ್ಗೆ ಆಘಾತ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದು ವಿಶ್ವ ವಿದ್ಯಾಲಯದ ಲೋಪ ಎಂದು ದೂರಿದ್ದಾರೆ.

ಬಿ.ಕಾಂ ಪದವಿಯ ’ಟೂರಿಸಂ ಏಜೆನ್ಸಿ‘ ವಿಷಯದ ಪರೀಕ್ಷೆಯನ್ನು ಒಟ್ಟು 70 ಅಂಕಗಳಿಗೆ ನಡೆಸಲಾಗಿತ್ತು. ಆದರೆ, ವಿದ್ಯಾರ್ಥಿಗಳಿಗೆ 70ಕ್ಕಿಂತಲೂ ಹೆಚ್ಚು ಅಂಕಗಳು ದೊರೆತಿವೆ.ಇದು ಮೌಲ್ಯಮಾಪನದ ಗುಣಮಟ್ಟವನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ನನಗೆ 74 ಅಂಕಗಳು ದೊರೆತಿವೆ. ಅಂಕಪಟ್ಟಿ ನೋಡಿದಾಗ ನನಗೆ ಆಘಾತ ವಾಯಿತು. ನನ್ನ ಸ್ನೇಹಿತರಿಗೂ 71, 89,73 ಅಂಕಗಳು ದೊರೆತಿವೆ’ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

’ಟೂರಿಸಂ ಏಜೆನ್ಸಿ’ ವಿಷಯವನ್ನು ಸುಮಾರು 500 ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿದ್ದಾರೆ. 2021ರ ಆಗಸ್ಟ್‌ನಲ್ಲಿ ಈ ವಿಷಯದ ಪರೀಕ್ಷೆ ನಡೆದಿತ್ತು. ಕೆಲ ದಿನಗಳ ಹಿಂದೆ ಫಲಿತಾಂಶ ಪ್ರಕಟಿಸಲಾಗಿತ್ತು.

ಫಲಿತಾಂಶ ವಾಪಸ್‌: ಕುಲಸಚಿವ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲಸಚಿವ (ಮೌಲ್ಯಮಾಪನ) ಪ್ರೊ. ಜೆ.ಟಿ. ದೇವರಾಜು ಅವರು, ‘ಈ ಫಲಿತಾಂಶವನ್ನು ವಾಪಸ್‌ ಪಡೆಯ ಲಾಗುವುದು. ಡಿಜಿಟಲ್‌ ಮೌಲ್ಯಮಾಪನ ನಡೆಸಿರುವುದರಿಂದ ಸಂಬಂಧಪಟ್ಟ ವ್ಯಕ್ತಿಗಳು ಸರಿಯಾಗಿ ಗಮನಿಸಿಲ್ಲ. ಅಂಕಗಳನ್ನು ಸರಿಪಡಿಸಿ ಹೊಸದಾಗಿ ಫಲಿತಾಂಶ ಪ್ರಕಟಿಸಲಾಗುವುದು‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT