ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಚಳಿ ಏರಿಳಿತ

Last Updated 11 ಫೆಬ್ರುವರಿ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ಜನವರಿ ಕೊನೆಯ ವಾರದಲ್ಲಿ ತಾಪಮಾನ ಹೆಚ್ಚಳದಿಂದ ಕಡಿಮೆಯಾಗಿದ್ದ ಚಳಿ, ಕಳೆದೆರಡು ದಿನಗಳಿಂದ ನಗರದಲ್ಲಿ ಮತ್ತೆ ಹೆಚ್ಚಾಗಿದೆ. ಸಂಜೆಯಿಂದಲೇ ಶುರುವಾಗುತ್ತಿರುವ ಚುಮುಚುಮು ಚಳಿ ಹಾಗೂ ಮುಂಜಾನೆ 8 ಗಂಟೆವರೆಗೂ ಮುಂದುವರಿಯುತ್ತಿದ್ದು, ಜನ ಬೆಚ್ಚನೆಯ ಬಟ್ಟೆಗಳ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನಲ್ಲಿಸೋಮವಾರ 30 ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ ವಿಮಾನ ನಿಲ್ದಾಣ 29 ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೂ, ರಾತ್ರಿಯಿಂದಲೇ ಚಳಿ ಕಾಡುತ್ತಿತ್ತು. ಮಂಗಳವಾರ ಗರಿಷ್ಠ 30 ಹಾಗೂ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

‘ನವೆಂಬರ್‌ನಲ್ಲಿ ಮೊದಲ್ಗೊಂಡು ಜನವರಿವರೆಗೆ ಚಳಿ ಪ್ರಮಾಣ ಹೆಚ್ಚಾಗಿರುತ್ತದೆ. ತಾಪಮಾನ ಏರಿಳಿತದಿಂದ ಫೆಬ್ರುವರಿಯಲ್ಲಿ ಚಳಿಯಲ್ಲಿ ವ್ಯತ್ಯಾಸ ಕಾಣಬಹುದು. ನಿತ್ಯ ಏರಿಕೆಯೂ ಆಗದು, ಇಳಿಕೆಯೂ ಆಗದು. ಚಳಿಗಾಲದಲ್ಲಿ ದಿನದಿಂದ ದಿನಕ್ಕೆ ಚಳಿ ಪ್ರಮಾಣದಲ್ಲಿ ವ್ಯತ್ಯಯ ಸಾಮಾನ್ಯ’ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಗೀತಾ ಅಗ್ನಿಹೋತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ 48 ಗಂಟೆಗಳವರೆಗೆನಗರದಲ್ಲಿ ಗರಿಷ್ಠ 31 ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಈ ವಾರದಲ್ಲಿ ಮುಂಜಾನೆ ವೇಳೆ ಚಳಿ ಕೊಂಚ ಹೆಚ್ಚಾಗಿರಲಿದೆ. ಉಳಿದಂತೆ ಸಂಜೆ ವೇಳೆ ಚಳಿ ತಗ್ಗಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT