ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು 2022, 2023 ಹಾಗೂ 2024ನೇ ಸಾಲುಗಳ ಪುಸ್ತಕ ಬಹುಮಾನ ಪ್ರಕಟಿಸಿದ್ದು, ಒಂಬತ್ತು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ ನೇತೃತ್ವದ ಆಯ್ಕೆ ಸಮಿತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

2022ನೇ ಸಾಲಿಗೆ ‘ಕಲಬುರಗಿ ಜಿಲ್ಲೆಯ ಬಂಜಾರ ಮಹಿಳೆಯರ ಸ್ಥಿತಿ ಗತಿ’ ಸಂಶೋಧನಾ ಕೃತಿಗೆ ಶ್ರೀದೇವಿ ಎಲ್., ‘ಜಾಗೋ ಬಂಜಾರ’ ಕವನಸಂಕಲನಕ್ಕೆ ರಾಮು ಎನ್.ರಾಠೋಡ್ ಮಸ್ಕಿ, ‘ಶ್ರೀ ಪ್ರೋಮಾಸಾಧ’ ಜೀವನ ಚರಿತ್ರೆಗೆ ಕಾಂತ ರಾಮಪ್ಪ ಜಾಧವ ಆಯ್ಕೆಯಾಗಿದ್ದಾರೆ.

2023ನೇ ಸಾಲಿಗೆ ‘ಮಹಾ ಚಲನೆ’ ಕೃತಿಗೆ ಡಿ. ರಾಮಾನಾಯಕ್, ‘ಮಠ’ ಕಾದಂಬರಿಗೆ ಇಂದುಮತಿ ಲಮಾಣಿ, ‘ಗೋರ್ಬೋಲಿಯ ವೊಜಾಳೊ’ ವಿಮರ್ಶಾ ಕೃತಿಗೆ ಉಮೇಶ್ ನಾಯ್ಕ್ ಎನ್. ಹುಳಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.

2024ನೇ ಸಾಲಿಗೆ ‘ವಲಸೆ ಹಕ್ಕಿಯ ಹಾಡು’ ಆತ್ಮಕತೆಗೆ ಪ್ರೊ. ಕೃಷ್ಣನಾಯಕ್, ‘ಸೋಶಿಯೊ ಎಕನಾಮಿಕ್ಸ್ ಕಲ್ಚರಲ್ ಆ್ಯಂಡ್ ಪೊಲಿಟಿಕಲ್’ ಸಂಶೋಧನಾ ಕೃತಿಗೆ ಪರಮೇಶ್ ನಾಯಕ್, ‘ಘಣ್ ಊಪರ್’ ಕೃತಿಗೆ ಸಥೀಶಾ ಗಟ್ಟಿ ಮಂಡೆಲಾ ಭಾಜನರಾಗಿದ್ದಾರೆ.

ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ. ಮಾರ್ಚ್ ತಿಂಗಳಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗುವುದು ಎಂದು ಎ.ಆರ್. ಗೋವಿಂದಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.