ಭಾನುವಾರ, ಏಪ್ರಿಲ್ 11, 2021
33 °C

ಸ್ಕೀಮರ್‌ ಮೆಷಿನ್‌ ಅಳವಡಿಸಿ ಎಟಿಎಂನಿಂದ ಹಣ ದೋಚಲು ಯತ್ನ: ಇಬ್ಬರು ವಿದೇಶಿಗರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ATM Theft attempt in Bengaluru

ಬೆಂಗಳೂರು: ಎಟಿಎಂಗಳಿಗೆ ಸ್ಕೀಮರ್‌ ಮೆಷಿನ್‌ ಅಳವಡಿಸಿ ಗ್ರಾಹಕರ ಡಾಟಾಗಳನ್ನು ಕಳವು ಮಾಡಿ, ಹಣ ದೋಚಲು ಯತ್ನಿಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಆರ್‌.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.

ಉಗಾಂಡದ ಫೆಲಿಕ್ಸ್‌ ಕಿಸ್ಸಿಬೊ (25) ಮತ್ತು ತಾಂಜೇನಿಯಾದ ಖೈರುನ್‌ ಅಬ್ದುಲ್ಲ (32) ಬಂಧಿತರು. ಇಬ್ಬರೂ ಸದ್ಯ ಯಲಹಂಕದ ಕೋಗಿಲು ಬಳಿ ನೆಲೆಸಿದ್ದಾರೆ.


ಬಂಧಿತ ಆರೋಪಿಗಳು

ಆರೋಪಿಗಳಿಂದ 12 ವಿವಿಧ ಬ್ಯಾಂಕುಗಳ ಎಟಿಎಂ ಕಾರ್ಡ್‌ಗಳು, ಮೂರು ಮೊಬೈಲ್‌ ಫೋನುಗಳು, ಲ್ಯಾಪ್‌ಟಾಪ್, ಸ್ಕೀಮರ್‌ ಮೆಷಿನ್‌, ಲೋಡರ್‌, ರಹಸ್ಯ ಕ್ಯಾಮೆರಾ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಯೂನಿಯನ್‌ ಬ್ಯಾಂಕಿನ (ಕಾರ್ಪೊರೇಷನ್‌ ಬ್ಯಾಂಕ್‌) ಗಂಗಾನಗರ ಶಾಖೆಯ ಮೆನೇಜರ್‌ ಶ್ರೀನಿವಾಸ ರೆಡ್ಡಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

‘ಬ್ಯಾಂಕಿನ ಎಟಿಎಂ ಪ್ರವೇಶಿಸಿದ್ದ ಈ ವಿದೇಶಿಗಳು ಸ್ಕೀಮರ್ ಮೆಷಿನ್‌ ಮತ್ತು ಹಲವು ಎಟಿಎಂ ಕಾರ್ಡ್‌ಗಳನ್ನು ಹಿಡಿದುಕೊಂಡು ಹಣ ಡ್ರಾ ಮಾಡುತ್ತಿದ್ದುದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಅದರ ಆಧಾರದಲ್ಲಿ ಬಂಧಿಸಲಾಗಿದೆ. ಸೈಬರ್‌ ಕಾಯ್ದೆ ಮತ್ತು ವಂಚನೆ ಪ್ರಕರಣದ ಅಡಿ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.


ಬಂಧಿತರಿಂದ ವಶಪಡಿಸಿಕೊಂಡ ವಸ್ತುಗಳು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು