ಬೆಂಗಳೂರು: ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸಾಮೂಹಿಕ ಸ್ವಚ್ಛತಾ’ ಕಾರ್ಯ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ನಡೆಸಲಾಯಿತು.

ಪೂರ್ವ ವಲಯ ವ್ಯಾಪ್ತಿಯ ಪುಲಕೇಶಿನಗರ ವಿಭಾಗದ ರಿಚರ್ಡ್ಸ್ ಟೌನ್ ಹಾಗೂ ಎಚ್ಬಿಆರ್ ಉಪ ವಿಭಾಗದ ಟ್ಯಾನರಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಬಳಸಿ ರಸ್ತೆಯ ಇಕ್ಕೆಲಗಳಲ್ಲಿದ್ದ ಕಟ್ಟಡದ ಭಗ್ನಾವಶೇಷಗಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಸಿ.ವಿ. ರಾಮನ್ ನಗರ ವಿಭಾಗದ ಕಾಕ್ಸ್ ಟೌನ್ ಮಾರ್ಕೆಟ್ನ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಶಿವಾಜಿನಗರ ವಿಭಾಗದ ಹಲಸೂರು ಕೆರೆ ಹಾಗೂ ಕೆರೆಯ ಸುತ್ತಲಿನ ಪ್ರದೇಶಗಳಲ್ಲಿ ಗಣೇಶ ವಿಸರ್ಜನೆ ಸಂಬಂಧ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಪಶ್ಚಿಮ ವಲಯ ವ್ಯಾಪ್ತಿಯ ಗೋವಿಂದರಾಜನಗರ ವಿಭಾಗದ ನಾಗರಬಾವಿ, ಮಲ್ಲೇಶ್ವರ, ಅರಮನೆ ನಗರ, ಚಾಮರಾಜಪೇಟೆ ವಿಭಾಗದ ಪಾದರಾಯನಪುರ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದ ಸಿಂಡಿಕೇಟ್ ಲೇಔಟ್ನಿಂದ (ಶಾಪ್ ರೈಟ್) ಅಂದ್ರಹಳ್ಳಿ ವೃತ್ತ, ಅಂದ್ರಹಳ್ಳಿ ಮುಖ್ಯರಸ್ತೆವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಟಿವಿಎಸ್ ಕ್ರಾಸ್ ಜಂಕ್ಷನ್ ನಿಂದ ಪೀಣ್ಯ ಪೋಲಿಸ್ ಠಾಣೆ ಮಾರ್ಗವಾಗಿ ತುಮಕೂರು ರಸ್ತೆಯವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಾಚರಣೆ ವೇಳೆ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ತಪಾಸಣೆ ನಡೆಸಿ, 47 ಪ್ರಕರಣಗಳಿಂದ ₹71,500 ದಂಡ ವಸೂಲಿ ಮಾಡಲಾಗಿದೆ.

ಯಲಹಂಕ ವಲಯದಲ್ಲಿ ಕೋಗಿಲು ಮುಖ್ಯರಸ್ತೆ ಹಾಗೂ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಸಾಮೂಹಿಕ ಸ್ವಚ್ಛತೆ ನಡೆಸಲಾಯಿತು. ಮದರ್ ಡೇರಿ ಕ್ರಾಸ್, ವೀರ ಸಾವರ್ಕರ್ ಮೇಲ್ಸೇತುವೆ ಕೆಳಭಾಗದಲ್ಲಿನ ತಳ್ಳುಗಾಡಿಗಳನ್ನು, ಯಲಹಂಕ ನ್ಯೂ ಟೌನ್ನ 4ನೇ ಮುಖ್ಯ ರಸ್ತೆ ಹಾಗೂ 4ನೇ ಅಡ್ಡರಸ್ತೆಯ ಪಾದಚಾರಿ ಮಾರ್ಗದಲ್ಲಿನ ಅಂಗಡಿ ಸಾಮಗ್ರಿಗಳನ್ನು, ಅಂಗಡಿಗಳನ್ನು ಹಾಗೂ ಬೆಳ್ಳಹಳ್ಳಿಯ ಪಾದಚಾರಿ ಮಾರ್ಗದಲ್ಲಿನ ಅಡೆತಡೆಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ತಿರುಮೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಬೇಕರಿಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲನೆ ನಡೆಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಬಣ್ಣಗಳ ಬಳಕೆಯನ್ನು ಪರಿಶೀಲಿಸಿ, ಉಲ್ಲಂಘನೆಯಾದಲ್ಲಿ ನೋಟಿಸ್ ನೀಡಲಾಯಿತು. ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ 57 ಪ್ರಕರಣಗಳಿಂದ ₹59,000 ದಂಡ ವಸೂಲಿ ಮಾಡಿ, 85 ಕೆ.ಜಿ ಏಕ ಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಯಿತು.

ಗುಂಡಿ ದುರಸ್ತಿ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಹೊರಮಾವು ರಸ್ತೆ, ಕಾರ್ಮೆಲರನ್ ರಸ್ತೆ, ಕುಂದಲಹಳ್ಳಿ, ಬ್ರೂಕ್ ಫೀಲ್ಡ್ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಹಾಗೂ ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಅಶ್ವತ್ಥ ನಗರ, ಮಾರತ್ಹಳ್ಳಿ ಮುಖ್ಯರಸ್ತೆ ಹಾಗೂ ನಲ್ಲೂರಹಳ್ಳಿ ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.