ಸೋಮವಾರ, ಜೂನ್ 1, 2020
27 °C
ಕೊರೊನಾ ಸೋಂಕು ನಿಯಂತ್ರಣ * 17 ಹೋಟೆಲ್‌ಗಳನ್ನು ಗುರುತಿಸಿದ ಬಿಬಿಎಂಪಿ

ಶಂಕಿತರ ಪ್ರತ್ಯೇಕ ವಾಸಕ್ಕೆ ಹೋಟೆಲ್‌ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿರಿಸುವುದಕ್ಕೆ ಹೋಟೆಲ್‌ಗಳನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗಿದ್ದು, ಒಟ್ಟು 17 ಹೋಟೆಲ್‌ಗಳನ್ನು ಗುರುತಿಸಿದೆ.

ಕೊರೊನಾ ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳಿಗೆ ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಶಿಫಾರಸು ಮಾಡಲಾಗಿದೆ. ಈ ಅವಧಿಯಲ್ಲಿ ಅವರಿಗೆ ಜ್ವರ, ಕೆಮ್ಮು, ನೆಗಡಿಯಂತಹ ರೋಗ ಲಕ್ಷಣ ಕಂಡುಬಂದಲ್ಲಿ, ಶೀಘ್ರ ಚಿಕಿತ್ಸೆ ಒದಗಿಸಬೇಕಾಗಿರುತ್ತದೆ. ಚಿಕಿತ್ಸೆಗೆ ಮುನ್ನ ರೋಗದ ಗುಣಲಕ್ಷಣಗಳಿಗೆ ಅನುಗುಣವಾಗಿ ಅವರ ಗಂಟಲ ದ್ರವದ ಮಾದರಿಗಳನ್ನು ಪಡೆದು ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ. ಅದರ ವರದಿ ಕೈಸೇರುವವರೆಗೂ ಅಂತಹವರನ್ನು ನೇರವಾಗಿ ಮನೆಗೆ ಕಳುಹಿಸುವ ಬದಲಾಗಿ, ಗರಿಷ್ಠ 2 ದಿನಗಳು ಪ್ರತ್ಯೇಕ ವಾಸಕ್ಕೆ ಅವಕಾಶ ಕಲ್ಪಿಸಬೇಕಿದೆ. ಈ ಸಲುವಾಗಿ ಹೋಟೆಲ್‌ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕಚೇರಿ ಆದೇಶದಲ್ಲಿ ಶನಿವಾರ ತಿಳಿಸಿದೆ.

ಈ ಹೋಟೆಲ್‌ಗಳಲ್ಲಿ ಎ.ಸಿ ಇರುವಂತಿಲ್ಲ. ಇಲ್ಲಿ ತಂಗುವ ಸೋಂಕು ಶಂಕಿತರ ಸಂಖ್ಯೆಗಳಿಗೆ ಅನುಗುಣವಾಗಿ ಪಾಲಿಕೆ ಶುಲ್ಕ ಪಾವತಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು