ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ಸೊರಗಿದ ಕೆಂಪೇಗೌಡ ಗೋಪುರ

Last Updated 10 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆಯ ಕೇಂದ್ರ ಕಚೇರಿಯ ಸಮೀಪದಲ್ಲಿರುವ ನಾಡಪ್ರಭು ಕೆಂಪೇಗೌಡ ಗೋಪುರ ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಕೆಂಪೇಗೌಡರು ಬೆಂಗಳೂರಿನ ಗಡಿಗಳ ಗುರುತಿಗಾಗಿ ನಿರ್ಮಿಸಿದ್ದ ಗೋಪುರಗಳ ಮಾದರಿಯಲ್ಲೇ 2006ರಲ್ಲಿ ಇದನ್ನು ನಿರ್ಮಿಸಲಾಗಿತ್ತು. ಇದರ ತಳಭಾಗದಲ್ಲಿ ಕಾರಂಜಿ ಕೊಳವನ್ನೂ ರಚಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗೋಪುರ ಹಾಗೂ ಕಾರಂಜಿ ಕೊಳದ ನಿರ್ವಹಣೆಯನ್ನೇ ಪಾಲಿಕೆ ಮರೆತುಬಿಟ್ಟಿದೆ. ಕೊಳದ ನೀರು ಪಾಚಿ ಕಟ್ಟಿದ್ದರೆ, ಗೋಪುರದ ಕೆಲವು ಕಲ್ಲುಗಳು ಉದುರಿ ಬಿದ್ದಿವೆ.

‘ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ನೆನಪಿನಗಾಗಿ ಕಟ್ಟಿರುವ ಈ ಗೋಪುರದ ಸಂರಕ್ಷಣೆ ನಮ್ಮ ಕರ್ತವ್ಯ. ಈ ಗೋಪುರವನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳುವಂತೆ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT