ಕುಸಿದು ಬಿದ್ದ ಬಿಬಿಎಂಪಿ ಸದಸ್ಯೆ ರೂಪಾ ಲಿಂಗೇಶ್ವರ್‌

7

ಕುಸಿದು ಬಿದ್ದ ಬಿಬಿಎಂಪಿ ಸದಸ್ಯೆ ರೂಪಾ ಲಿಂಗೇಶ್ವರ್‌

Published:
Updated:

ಬೆಂಗಳೂರು: ಬಿಬಿಎಂಪಿ ಸಾಮಾನ್ಯ ಸಭೆ ವೇಳೆ ಕಾರ್ಪೊರೇಟರ್‌ ರೂಪಾ ಲಿಂಗೇಶ್ವರ್‌ ಅವರು ಕುಸಿದು ಬಿದ್ದ ಘಟನೆ ನಡೆದಿದೆ. 

ಮಧ್ಯಾಹ್ನ ವೇಳೆ ಘಟನೆ ನಡೆದಿದ್ದು ಕೂಡಲೇ ಅವರನ್ನು ಸಭೆಯಿಂದ ಹೊರಕ್ಕೆ ಕರೆತರಲಾಯಿತು. ಸ್ಥಳದಲ್ಲಿದ್ದ ಬಿಬಿಎಂಪಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದರು. ರೂಪಾ ಅಸ್ವಸ್ಥರಾದ ಕಾರಣ ಸಭೆಯನ್ನು ಮೊಟಕುಗೊಳಿಸಲಾಯಿತು. ಇದೀಗ ರೂಪಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಲಿಕೆ ವೈದ್ಯರು ತಿಳಿಸಿದ್ದಾರೆ. 

ಕಲಾಪ ನಡೆಯುತ್ತಿದ್ದ ವೇಳೆ ಆಡಳಿತ ಪಕ್ಷದ ಸಾಲಿನ ಆಸನದ ಎರಡನೇ ಸಾಲಿನಲ್ಲಿ ಅವರು ಕುಳಿತಿದ್ದರು. ನಗರದ ನೀರು ಪೂರೈಕೆ, ಸುರಕ್ಷಿತ ನಗರ ಸಂಬಂಧಿಸಿದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !