ಬೆಂಗಳೂರು: ನಗರವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಪ್ರಯತ್ನದಲ್ಲಿ ಬಿಬಿಎಂಪಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದೆ. 2019ರ ಸ್ವಚ್ಛ ಸರ್ವೇಕ್ಷಣ್ ಸರ್ವೆಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್) ಶ್ರೇಯವನ್ನೂ ಪಡೆದಿರದ ಬಿಬಿಎಂಪಿ 2020ರ ಸರ್ವೆಯಲ್ಲಿ ‘ಒಡಿಎಫ್ ಪ್ಲಸ್’ ಹಾಗೂ ‘ಒಡಿಎಫ್ ಪ್ಲಸ್ ಪ್ಲಸ್’ ಶ್ರೇಯಗಳೆರಡನ್ನೂ ದಕ್ಕಿಸಿಕೊಂಡಿದೆ.

ಈ ಶ್ರೇಯವನ್ನು ಪಡೆಯುವುದರೊಂದಿಗೆ ಸ್ವಚ್ಛ ನಗರಗಳನ್ನು ನಿರ್ಧರಿಸುವ 2020ನೇ ಸಾಲಿನ ಸ್ವಚ್ಛತಾ ಸಮೀಕ್ಷೆಯಲ್ಲಿ (ಸ್ವಚ್ಛ ಸರ್ವೇಕ್ಷಣ್)ಬಿಬಿಎಂಪಿ ಬಯಲು ಬಹಿರ್ದೆಸೆ ಮುಕ್ತಗೊಳಿಸುವುದಕ್ಕೆ ಮೀಸಲಾದ 500 ಅಂಕ ಪಡೆಯುವುದನ್ನು ಖಾತರಿಪಡಿಸಿಕೊಂಡಿದೆ.

ಈ ಬಾರಿ ಸಮೀಕ್ಷೆಯಲ್ಲಿ ಒಟ್ಟು 6000 ಅಂಕಗಳಿದ್ದು, ಅದರಲ್ಲಿ ನಾಗರಿಕರ ಪ್ರತಿಕ್ರಿಯೆ, ನೇರ ವೀಕ್ಷಣೆ, ಸೇವಾ ಗುಣಮಟ್ಟದ ಪ್ರಗತಿ ಹಾಗೂ ಸ್ವಯಂ ಪ್ರಮಾಣೀಕರಣಕ್ಕೆ ತಲಾ 1500 ಅಂಕಗಳನ್ನು ನಿಗದಿಪಡಿಸಲಾಗಿದೆ.

ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ನಗರ ಬಯಲು ಬಹಿರ್ದೆಸೆ ಮುಕ್ತಗೊಳಿಸುವ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಒಡಿಎಫ್, ಒಡಿಎಫ್ ಪ್ಲಸ್ ಹಾಗೂ ಒಡಿಎಫ್ ಪ್ಲಸ್ ಪ್ಲಸ್ ಎಂದು ಸ್ವಯಂ ಪ್ರಮಾಣೀಕರಣ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ನಗರಾಡಳಿತ ಸಂಸ್ಥೆಗಳ ಸ್ವಯಂ ಪ್ರಮಾಣೀಕರಣವನ್ನು ಸಮೀಕ್ಷಕರ ತಂಡ ಪರಿಶೀಲಿಸಿ ದೃಢೀಕರಿಸುತ್ತದೆ.

‘ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಮಾತ್ರ ಒಡಿಎಫ್ ಪ್ಲಸ್ ಪ್ಲಸ್ ಶ್ರೇಯ ಲಭಿಸಿದೆ. ಇದು ಬಿಬಿಎಂಪಿಯ ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಮನ್ನಣೆ. ಇದರಿಂದ ಕಳೆದ ಬಾರಿಯ ಸಮೀಕ್ಷೆಗಿಂತ ಈ ಬಾರಿ 500 ಅಂಕಗಳು ಹೆಚ್ಚುವರಿ
ಯಾಗಿ ಸಿಗಲಿವೆ. ಸ್ವಚ್ಛತಾ ಸಮೀಕ್ಷೆಯಲ್ಲಿ ಶ್ರೇಯಾಂಕ ಸುಧಾರಣೆ ಆಗಲಿದೆ’ ಎಂದು ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್ ತಿಳಿಸಿದರು.

‘ನಾವು 418 ಸಾರ್ವಜನಿಕ ಶೌಚಾಲಯಗಳನ್ನು ಅಭಿವೃದ್ಧಿಪಡಿಸಿ, ಅವುಗಳಲ್ಲಿ ಸದಾ ನೀರು ಪೂರೈಕೆಯಾಗುವಂತೆ ನೋಡಿಕೊಂಡಿದ್ದೆವು. ಅಂಗವಿಕಲರಿಗಾಗಿ ರ‍್ಯಾಂಪ್ ವ್ಯವಸ್ಥೆಗಳನ್ನು ಕಲ್ಪಿಸಿದ್ದೆವು. ಇವುಗಳಲ್ಲಿ ಆಯ್ದ 100 ಶೌಚಾಲಯಗಳನ್ನು ಸಮೀಕ್ಷರ ತಂಡ ಪರಿಶೀಲಿಸಿತ್ತು’ ಎಂದರು.

2019ರ ಸಮೀಕ್ಷೆಯಲ್ಲಿಬೆಂಗಳೂರು 194ನೇ ಸ್ಥಾನಕ್ಕೆ ಕುಸಿದಿತ್ತು.

ಏನಿದು ಒಡಿಎಫ್ ಪ್ಲಸ್?

ಒಬ್ಬ ವ್ಯಕ್ತಿಯೂ ಬಯಲಿನಲ್ಲಿ ಮಲ ಅಥವಾ ಮೂತ್ರ ವಿಸರ್ಜನೆ ಮಾಡು
ವಂತಹ ಪರಿಸ್ಥಿತಿ ಇರಬಾರದು. ಎಲ್ಲ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳೂ ಸದಾ ಬಳಸುವ ಸ್ಥಿತಿಯಲ್ಲಿರಬೇಕು ಮತ್ತು ಅವುಗಳ ನಿರ್ವಹಣೆ ಚೆನ್ನಾಗಿರಬೇಕು. ಅಂತಹ ನಗರಕ್ಕೆ ಒಡಿಎಫ್ ಪ್ಲಸ್ ಮನ್ನಣೆ ನೀಡಲಾಗುತ್ತದೆ.

ಪ್ರತಿಯೊಂದು ಮನೆಯಲ್ಲೂ ಶೌಚಾಲಯ ಹೊಂದಿರುವುದು, ಮನೆಯಲ್ಲಿ ಸ್ಥಳಾವಕಾಶ ಇಲ್ಲದ ಕಡೆ 500 ಮೀ ದೂರದೊಳಗೆ ಸಮುದಾಯ ಶೌಚಾಲಯ ಹೊಂದಿರುವುದು ಹಾಗೂ ಸಾರ್ವಜನಿಕ ಪ್ರದೇಶ ಅಥವಾ ವಾಣಿಜ್ಯ ಪ್ರದೇಶಗಳಲ್ಲಿ ಗರಿಷ್ಠ 1 ಕಿ.ಮೀ. ದೂರದಲ್ಲಿ ಒಂದಾದರೂ ಸಾರ್ವಜನಿಕ ಶೌಚಾಲಯವನ್ನು ಹೊಂದಿರುವುದು ಈ ಶ್ರೇಯ ಪಡೆಯಲು ಇರಬೇಕಾದ ಮಾನದಂಡಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.