ಬೆಂಗಳೂರು: ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ಮುಖ್ಯ ಶಿಕ್ಷಕರ ಕೊಠಡಿ ಬಳಿ ಅಳವಡಿಸಿದ್ದಸಿ.ಸಿ.ಟಿ.ವಿ ಕ್ಯಾಮೆರಾವನ್ನೇ ಕದ್ದೊಯ್ದಿದ್ದಾರೆ.

ಆ ಸಂಬಂಧ ಶಾಲಾ ಶಿಕ್ಷಕಿ ಕೋಮಲಾದೇವಿ, ಕೆಂಪೇಗೌಡ ನಗರ ಠಾಣೆಗೆ ದೂರು ನೀಡಿದ್ದಾರೆ.

‘ಜ. 14ರ ಸಂಜೆ 5 ಗಂಟೆಗೆ ಶಾಲೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದೆವು. ಜ. 16ರಂದು ಬೆಳಿಗ್ಗೆ 9.45 ಗಂಟೆಗೆ ಶಾಲೆಗೆ ಎಂದಿನಂತೆ ವಾಪಸ್ ಬಂದಾಗ ಕಳ್ಳತನದ ವಿಷಯ ಗೊತ್ತಾಗಿದೆ. ಶಾಲಾ ರಜೆ ಅವಧಿಯಲ್ಲೇ ಯಾರೋ ದುಷ್ಕರ್ಮಿಗಳು ಕಳ್ಳತನ ಎಸಗಿದ್ದಾರೆ’ ಎಂದು ಕೋಮಲಾದೇವಿ ದೂರಿನಲ್ಲಿ ತಿಳಿಸಿದ್ದಾರೆ.

‘ಶಾಲೆಯ ನೆಲಮಹಡಿಯಲ್ಲಿರುವ ಗ್ರೀಲ್ ಗೇಟ್‌ನ ಕಿಂಡಿಯ ಮೂಲಕ ಒಳಗೆ ನುಗ್ಗಿದ್ದ ಕಳ್ಳರು, ಎರಡನೇ ಮಹಡಿಯಲ್ಲಿರುವ ಆಟದ ಕೊಠಡಿಯ ಬಾಗಿಲಿನ ಬೀಗ ಮುರಿದಿದ್ದಾರೆ. ಆ ಕೊಠಡಿಯಲ್ಲಿದ್ದ ವಾಲಿಬಾಲ್, ಥ್ರೋಬಾಲ್ ಹಾಗೂ ಕ್ರೀಡಾ ಸಮವಸ್ತ್ರಗಳನ್ನು ಕದ್ದುಕೊಂಡು ಹೋಗಿದ್ದಾರೆ’.

‘ಹೋಗುವಾಗ, ಮುಖ್ಯ ಶಿಕ್ಷಕರ ಕೊಠಡಿ ಎದುರು ಹಾಕಲಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ಸಹ ಕದ್ದೊಯ್ದಿದ್ದಾರೆ. ಕಳುವಾದ ವಸ್ತುಗಳ ಬೆಲೆ ಸುಮಾರು ₹20 ಸಾವಿರ ಆಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.