ಗುರುವಾರ , ಆಗಸ್ಟ್ 18, 2022
25 °C
ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ

ಬಿಬಿಎಂಪಿ ವಾರ್ಡು ವಿಂಗಡಣೆ: ಆರ್.ಆರ್. ನಗರದಲ್ಲೇ ಇತಿಹಾಸ ಪುರುಷರು ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದಲ್ಲೇ ಹೆಚ್ಚು ಇತಿಹಾಸ ಪರುಷರಿದ್ದಾರೆ! ಹೌದು, ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ ವೇಳೆ ಇತಿಹಾಸ ಪುರುಷರ ಹೆಸರಿರುವ ವಾರ್ಡ್‌ಗಳೆಲ್ಲವೂ ಬಹುತೇಕ ಇದೇ ಕ್ಷೇತ್ರದಲ್ಲಿಯೇ ಇವೆ.

ಈ ಹಿಂದೆ ಇದ್ದ ಜಾಲಹಳ್ಳಿ ವಾರ್ಡ್‌ ಈಗ ಕನ್ನೇಶ್ವರರಾಮ ಎಂದೂ, ಜೆ.ಪಿ.ಪಾರ್ಕ್ ವಾರ್ಡ್‌ ವೀರಮದಕರಿ ಎಂದೂ ಬದಲಾಗಿದೆ. ಯಶವಂತಪುರ ವಾರ್ಡ್‌ ಈಗ ಜೆ.ಪಿ. ಪಾರ್ಕ್‌ ಆಗಿದ್ದು, ಭೌತಿಕವಾಗಿ ಜೆ.ಪಿ.ಪಾರ್ಕ್ ಕೂಡ ಇದೇ ವಾರ್ಡ್‌ಗೆ ಸೇರ್ಪಡೆಯಾಗಿದೆ.

ಲಕ್ಷ್ಮಿದೇವಿನಗರ ವಾರ್ಡ್‌ಗೆ ಚಾಣಕ್ಯ, ಲಗ್ಗೆರೆ ವಾರ್ಡ್‌ಗೆ ಛತ್ರಪತಿ ಶಿವಾಜಿ, ಹೊಸ ವಾರ್ಡ್‌ಗಳಿಗೆ ರಣಧೀರ ಕಂಠೀರವ, ವೀರ ಸಿಂಧೂರ ಲಕ್ಷ್ಮಣ, ವಿಜಯನಗರ ಕೃಷ್ಣದೇವರಾಯ, ಸರ್ ಎಂ.ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರುಗಳನ್ನು ಇಡಲಾಗಿದೆ. ಇವೆಲ್ಲವೂ ಇದೇ ಕ್ಷೇತ್ರದಲ್ಲಿ ಇರುವುದು ವಿಶೇಷ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲೂ ಚಿಕ್ಕಲಸಂದ್ರ ವಾರ್ಡ್‌ ಹೆಸರು ವಿಕ್ರಮನಗರ ಎಂದೂ ಬದಲಾಗಿದೆ. ಹೊಸದಾಗಿ ಸೇರ್ಪಡೆಯಾಗಿರುವ ವಾರ್ಡ್‌ವೊಂದಕ್ಕೆ ದೀನ್‌ ದಯಾಳು ವಾರ್ಡ್ ಎಂದು ಹೆಸರಿಸಲಾಗಿದೆ.

ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ವಾರ್ಡ್‌ಗಳ ಚಿತ್ರಣವೂ ಸಂಪೂರ್ಣ ಬದಲಾಗಿದೆ. ಛತ್ರಪತಿ ಶಿವಾಜಿ ವಾರ್ಡ್‌, ಜೆ.ಪಿ. ಪಾರ್ಕ್ ವಾರ್ಡ್‌ಗಳ ನಕ್ಷೆ ನೋಡಿದರೆ ಚಿತ್ರ–ವಿಚಿತ್ರವಾಗಿ ವಿಂಗಡಣೆ ಆಗಿರುವುದು ಗೊತ್ತಾಗುತ್ತದೆ.

 

ವಾರ್ಡ್ ವೀಕ್ಷಣೆ ಸುಲಭವಲ್ಲ

ವಾರ್ಡ್‌ ವಿಂಗಡಣೆಯ ನಕ್ಷೆ ಸಹಿತ ಸಂಪೂರ್ಣ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಆದರೆ, ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಇಲ್ಲ. ಜತೆಗೆ ವೀಕ್ಷಣೆ ಮಾಡಬೇಕೆಂದರೆ ತಿಣುಕಾಡಬೇಕಾಗಿದೆ.

ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಮಾತ್ರ ವೀಕ್ಷಣೆಗೆ ಅವಕಾಶ ಇದೆ. ಮೊಬೈಲ್ ಫೋನ್‌ನಲ್ಲಿ ವೀಕ್ಷಣೆ ಮಾಡಲು ಮುಂದಾದರೆ, ಕ್ಷೇತ್ರವಾರು, ವಾರ್ಡ್‌ವಾರು ಮಾಹಿತಿಯೇ ಲಭ್ಯವಾಗುವುದಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು