ಸೋಮವಾರ, ಮೇ 17, 2021
24 °C

16 ತಿಂಗಳ ಬಳಿಕ ಬಿಡಿಎ ಆಡಳಿತ ಮಂಡಳಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಡಳಿತ ಮಂಡಳಿಯು  ಬರೋಬ್ಬರಿ 16 ತಿಂಗಳ ಬಳಿಕ ಸಭೆ ಸೇರುತ್ತಿದೆ. ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್‌ ಅಧ್ಯಕ್ಷತೆಯಲ್ಲಿ ಇದೇ 17ರಂದು (ಬುಧವಾರ ) ಮಧ್ಯಾಹ್ನ 3 ಗಂಟೆಗೆ ಸಭೆ ನಿಗದಿಯಾಗಿದೆ.

2019ರ ಫೆಬ್ರುವರಿ ತಿಂಗಳಲ್ಲಿ ಬಿಡಿಎ ಆಡಳಿತ ಮಂಡಳಿ ಸಭೆ ನಡೆದಿತ್ತು. ಆ ಬಳಿಕ 2020ರ ಫೆಬ್ರುವರಿಯಲ್ಲಿ ಸಭೆಗೆ ಸಮಯ ನಿಗದಿಪಡಿಸಲಾಗಿತ್ತಾದರೂ ಕಾರಣಾಂತರಗಳಿದ ಅದನ್ನು ರದ್ದುಪಡಿಸಲಾಗಿತ್ತು. ಭಾರಿ ಸಮಯದಿಂದ ಆಡಳಿತ ಮಂಡಳಿ ಸಭೆಯೇ ನಡೆಯದ ಕಾರಣ ಅನೇಕ ಪ್ರಸ್ತಾವನೆಗಳು ಮಂಜೂರಾತಿಗಾಗಿ ಕಾಯುತ್ತಿವೆ. 

‘ಒಟ್ಟು 63 ಪ್ರಸ್ತಾವನೆಗಳು ಸಭೆಯ ಮುಂದೆ ಬರಲಿವೆ. ಎಲ್ಲಾ ಪ್ರಸ್ತಾವನೆಗಳೂ ಪ್ರಮುಖವಾದವುಗಳೇ ಆಗಿವೆ’ ಎಂದು ಬಿಡಿಎ ಆಯುಕ್ತ ಡಾ.ಎಚ್‌.ಆರ್‌.ಮಹದೇವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು