ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಹರಾಜಿಗೆ ಹೈಕೋರ್ಟ್‌ ತಡೆ

Last Updated 19 ಆಗಸ್ಟ್ 2020, 20:49 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಸೇರಿದ ವಾಣಿಜ್ಯ ಉದ್ದೇಶದ ನಿವೇಶನ ಮತ್ತು ಮೂಲೆ ನಿವೇಶನ ಹೊರತುಪಡಿಸಿ ಮಧ್ಯದ ನಿವೇಶನಗಳನ್ನು ಹರಾಜು ಹಾಕುವ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ.

ಮತ್ಯಾಲನಗರದ ನಿವಾಸಿ ಕೆರೋಜಿ ರಾವ್(ಮಾಜಿ ಸೈನಿಕ) ಅವರಿಗೆ 2006ರ ಜೂನ್‌ನಲ್ಲಿ ಅರವತ್ತಿ ಲೇಔಟ್‌ನಲ್ಲಿ ಬಿಡಿಎ ನಿವೇಶನ ನಿಗದಿಯಾಗಿತ್ತು.2007ರ ಜುಲೈ 4ರಂದು ಮಾರಾಟ ಒಪ್ಪಂದವನ್ನೂ ಬಿಡಿಎ ಮಾಡಿಕೊಂಡಿತ್ತು. ಅದೇ ದಿನ ಸ್ವಾಧೀನ ಪ್ರಮಾಣ ಪತ್ರವನ್ನೂ ನೀಡಿತ್ತು. ಇದಾದ 10 ವರ್ಷಗಳ ನಂತರ 2016ರಲ್ಲಿ ನಿವೇಶನ ಮಂಜೂರಾತಿ ರದ್ದುಪಡಿಸಲಾಗಿದೆ ಎಂದು ಬಿಡಿಎ ಮಾಹಿತಿ ನೀಡಿದೆ. ಈ ಸಂಬಂಧ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ನಡೆಯುತ್ತಿದೆ.

ಈ ನಡುವೆ, 2020ರ ಜೂನ್‌ 17ರಂದು ಬಿಡಿಎ ಅಧಿಸೂಚನೆ ಹೊರಡಿಸಿ ವಾಣಿಜ್ಯ, ವಸತಿ ಮತ್ತು ಮಧ್ಯದ ನಿವೇಶನಗಳನ್ನು ಹರಾಜು ಮಾಡಲು ಮುಂದಾಗಿತ್ತು. ಕೆರೋಜಿ ರಾವ್ ಅವರು ಮತ್ತೊಂದು ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು, ‘ನನ್ನಂತೆಯೇ ಅತಂತ್ರ ಸ್ಥಿತಿಯಲ್ಲಿರುವ ನಾಗರಿಕರನ್ನು ನಿರ್ಲಕ್ಷಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ಅರ್ಜಿ ಪರಿಗಣಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಮಧ್ಯದ ನಿವೇಶನಗಳನ್ನು ಹರಾಜು ಮಾಡದಂತೆ ನಿರ್ಬಂಧಿಸಿ ಆದೇಶಿಸಿದ್ದಾರೆ. ‘ಈ ಆದೇಶವು ವಾಣಿಜ್ಯ ಮತ್ತು ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ನಿರ್ಬಂಧಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT