ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ವ್ಯಾಪ್ತಿಯ ಸ್ವತ್ತುಗಳ ಮೇಲಿನ ತೆರಿಗೆಯನ್ನು ಶೇಕಡಾ 9 ರಿಂದ 50ರಷ್ಟು ಹೆಚ್ಚಳ ಮಾಡಿರುವುದನ್ನು ಆಸ್ತಿ ಮಾಲೀಕರು ತೀವ್ರವಾಗಿ ವಿರೋಧಿಸಿದ್ದಾರೆ.

ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ, ಅಂಜನಾಪುರ, ವಿಶ್ವೇಶ್ವರಯ್ಯ, ಅರ್ಕಾವತಿ, ಬನಶಂಕರಿ ಸೇರಿ 9 ಬಡಾವಣೆಗಳು, ಪ್ರಾಧಿಕಾರ ಅನುಮೋದಿತ ಬಡಾವಣೆ, ಹಂಚಿಕೆ ಮಾಡಿರುವ ಅಪಾರ್ಟ್ಮೆಂಟ್ ವಸತಿಗಳೂ ಸೇರಿದಂತೆ ಸುಮಾರು 1.22 ಲಕ್ಷಕ್ಕೂ ಹೆಚ್ಚು ಜನರಿಗೆ ತೆರಿಗೆ ಏರಿಕೆಯ ಬಿಸಿ ತಟ್ಟಿದೆ. ಅದರಲ್ಲೂ ಕೆಂಪೇಗೌಡ ಬಡಾವಣೆಗೆ ಶೇ 10 ರಿಂದ 50ರಷ್ಟು ಹೆಚ್ಚಳವಾಗಿದೆ.

ಮೂಲ ಸೌಕರ್ಯ ಕಲ್ಪಿಸದೇ ತೆರಿಗೆ ಹೆಚ್ಚಳದ ಕ್ರಮಕ್ಕೆ ವಿವಿಧ ಬಡಾವಣೆಗಳ ನಿವಾಸಿಗಳ ಸಂಘಗಳು ವಿರೋಧ ವ್ಯಕ್ತಪಡಿಸಿವೆ. ಆಸ್ತಿಗಳ ಮೇಲಿನ ತೆರಿಗೆ ಪರಿಷ್ಕರಣೆ ಅವೈಜ್ಞಾನಿಕವಾಗಿದ್ದು, ಕೂಡಲೇ ತೆರಿಗೆ ಹೆಚ್ಚಳ ವಾಪಸ್ ಪಡೆಯುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್ಕೆಪಿಎಲ್) ಮುಕ್ತ ವೇದಿಕೆಯ ಜಂಟಿ ಕಾರ್ಯದರ್ಶಿ ಸೂರ್ಯಕಿರಣ್, ‘ಎನ್ಕೆಪಿಎಲ್ ಬಡಾವಣೆಗೆ ಶೇ 10ರಿಂದ 50ರಷ್ಟು ಹೆಚ್ಚಳವಾಗಿದೆ. ಎಂಟು ವರ್ಷದಿಂದ ತೆರಿಗೆ ಪಾವತಿಸುತ್ತಿದ್ದೇವೆ. ಗುತ್ತಿಗೆ ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಾಗಿದೆ. ಹತ್ತು ವರ್ಷದವರೆಗೆ ನಿವೇಶನ ಮಾರಾಟ ಮಾಡುವಂತಿಲ್ಲ. ಬಡಾವಣೆಗೆ ಪೂರ್ಣ ಅಭಿವೃದ್ಧಿಯಾಗಿಲ್ಲ. ಹೀಗಿರುವಾಗ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವುದು ಅವಶ್ಯಕತೆಯೇ ಇಲ್ಲ. ನಿಯಮದ ಪ್ರಕಾರ ಆಸ್ತಿ ತೆರಿಗೆ ಪರಿಷ್ಕರಣೆಗೂ ಮುನ್ನ ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆದರೆ, ಇಲ್ಲಿ ನಿಯಮ ಪಾಲನೆ ಮಾಡಿಲ್ಲ. ಮೂಲ ಸೌಕರ್ಯ ಇಲ್ಲದೇ ಮನೆ ಕಟ್ಟಲು ಪರದಾಡುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತೆರಿಗೆ ಜತೆ ಸೆಸ್ ವಿಧಿಸುತ್ತಿರುವುದು ಅವೈಜ್ಞಾನಿಕ. ಯಾವ ಕಾರಣಕ್ಕೆ ಸೆಸ್ ಸಂಗ್ರಹ ಮಾಡಲಾಗುತ್ತಿದೆ ಎಂಬುದರ ಬಗ್ಗೆ ತಿಳಿಸಿಲ್ಲ. ಆಸ್ತಿ ತೆರಿಗೆ ಪರಿಷ್ಕರಣೆ ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಅರ್ಕಾವತಿ ಬಡಾವಣೆಯ ನಿವೇಶನ ಮಾಲೀಕ ನಾರಾಯಣಸ್ವಾಮಿ, ‘2006ರಲ್ಲಿ ನಿವೇಶನ ಹಂಚಿಕೆ ಮಾಡಲಾಯಿತು. ಈಗ ರಸ್ತೆ ನಿರ್ಮಿಸುವ ಕೆಲಸ ನಡೆಯುತ್ತಿದೆ. ಸಮರ್ಪಕ ವಿದ್ಯುತ್ ಪೂರೈಕೆ ಇಲ್ಲ. ಕಾವೇರಿ ನೀರಿನ ಸಂಪರ್ಕ ಇಲ್ಲ. ನೀರು, ವಿದ್ಯುತ್ ಇಲ್ಲದೇ ಮನೆ ಕಟ್ಟುವುದು ಹೇಗೆ? ಇಂತಹ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ತಿಂಗಳಿಗೆ ಟ್ಯಾಂಕರ್ ನೀರಿಗೆ ₹ 15 ಸಾವಿರ ವೆಚ್ಚವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಬನಶಂಕರಿ ಆರನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಎಸ್.ಮಹೇಶ್, ‘ಬಡಾವಣೆಗೆ ಮೂಲ ಸೌಕರ್ಯ ಇಲ್ಲ. 30X40 ಅಡಿ ನಿವೇಶನಕ್ಕೆ ಶೇ 30ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ತೆರಿಗೆ ಹೆಚ್ಚಳ ಮಾಡದಂತೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು’ ಎಂದರು.

‘ನಿಯಮದ ಪ್ರಕಾರ ತೆರಿಗೆ ಹೆಚ್ಚಳ

‘ಸ್ವತ್ತಿನ ಮಾರ್ಗಸೂಚಿ ಬೆಲೆ ಆಧಾರದ ಮೇಲೆ ಆಸ್ತಿ ತೆರಿಗೆ ನಿರ್ಧಾರ ಮಾಡಲಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದ್ದರಿಂದ ಆಸ್ತಿ ತೆರಿಗೆಯಲ್ಲಿ ಬದಲಾವಣೆ ಆಗಿದೆ. ಒಟ್ಟಾರೆ ಶೇ 14ರಷ್ಟು ಹೆಚ್ಚಳವಾಗಿದೆ. ಆದರೆ ಕೆಲವೊಂದು ಬಡಾವಣೆಗೆ ಶೇ 10 ರಿಂದ 20 ಶೇ 10 ರಿಂದ 50 ಏರಿಕೆ ಆಗಿದೆ. ತೆರಿಗೆ ಹೆಚ್ಚಳ ಅವೈಜ್ಞಾನಿಕ ಎಂಬ ಆರೋಪ ಸರಿಯಲ್ಲ. ಯಾವುದೇ ಗೊಂದಲ ಇದ್ದರೂ ಪ್ರಾಧಿಕಾರದಲ್ಲಿ ಬಗೆಹರಿಸಿಕೊಳ್ಳಬಹುದು. ತೆರಿಗೆ ಹೆಚ್ಚಳ ಆದೇಶ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಬಿಡಿಎ ಆರ್ಥಿಕ ಸದಸ್ಯ ಲೋಕೇಶ್ ಸ್ಪಷ್ಟಪಡಿಸಿದರು. ‘ಸರ್ಕಾರದಿಂದ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಇಲ್ಲ. ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಯಾಗದೇ ಬಾಕಿಯಿದೆ. ಎಲ್ಲರಿಗೂ ನೋಟಿಸ್ ಕಳುಹಿಸಲಾಗಿದೆ’ ಎಂದು ಹೇಳಿದರು.

ಅವೈಜ್ಞಾನಿಕ ತೆರಿಗೆ ಬೇಡ: ಸುರೇಶ್ ಕುಮಾರ್

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಮತ್ತು ಕಟ್ಟಡಗಳಿಗೆ ಅವೈಜ್ಞಾನಿಕವಾಗಿ ತೆರಿಗೆ ದರ ಪರಿಷ್ಕರಿಸುವ ಮೂಲಕ ಬೆಲೆ ಹೆಚ್ಚಳ ಬಿಸಿ ತಟ್ಟಿಸಲಾಗಿದೆ ಎಂದು ಶಾಸಕ ಎಸ್.ಸುರೇಶ್ ಕುಮಾರ್ ಆರೋಪಿಸಿದ್ದಾರೆ. ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಅಂತಿಮ ಮಾಲೀಕತ್ವ ಪ್ರಮಾಣಪತ್ರ ನೀಡುವವರೆಗೆ ಅವೈಜ್ಞಾನಿಕವಾಗಿ ವಿಧಿಸಿರುವ ತೆರಿಗೆಯನ್ನು ವಾಪಸ್ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ. ಕೆಲವು ಪ್ರಕರಣದಲ್ಲಿ ಶೇ 10ರಿಂದ 50ರಷ್ಟು ಹೆಚ್ಚಿಸಿರುವುದು ದಿಗ್ಭ್ರಮೆ ಉಂಟು ಮಾಡಿದೆ. ಮೂಲ ಸೌಕರ್ಯಗಳ ಕೊರತೆಯಿಂದಾಗಿ ನಿವೇಶನ ಮಾಲೀಕರು ಮನೆಯನ್ನು ನಿರ್ಮಿಸಲು ಸಾಧ್ಯವಾಗದ ತ್ರಿಶಂಕು ಪರಿಸ್ಥಿತಿಯಲ್ಲಿದ್ದಾರೆ. ತೆರಿಗೆ ಹೆಚ್ಚಳ ಬಗ್ಗೆ ಘೋಷಣೆಯನ್ನು ಹೊರಡಿಸದೆ ಏಕಾಏಕಿ ತಂತ್ರಾಂಶದಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದೆ. ಈ ಮೂಲಕ ನಿವೇಶನದಾರರಿಗೆ ತೆರಿಗೆ ಪಾವತಿಸುವಂತೆ ಒತ್ತಡ ಹಾಕುವುದು ಬಲವಂತದ ಕ್ರಮವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.