ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru | ಬಿಬಿಎಂಪಿಯಿಂದ 2.24 ಲಕ್ಷ ದೂರು ಇತ್ಯರ್ಥ

2023ರಿಂದ ನಾಗರಿಕರಿಂದ ಬಿಬಿಎಂಪಿಗೆ 2.37 ಲಕ್ಷ ದೂರು
Published 4 ಸೆಪ್ಟೆಂಬರ್ 2024, 16:12 IST
Last Updated 4 ಸೆಪ್ಟೆಂಬರ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ‘ಸಹಾಯ್‌ 2.0’ ತಂತ್ರಾಂಶ ಮೂಲಕ 2023ರಿಂದ 2024ರ ಸೆಪ್ಟೆಂಬರ್‌ 3ರವರೆಗೆ ನಾಗರಿಕರ 2.24 ಲಕ್ಷ ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 2,37,359 ದೂರುಗಳು ಈ ಅವಧಿಯಲ್ಲಿ ದಾಖಲಾಗಿದ್ದವು. 6,875 ದೂರುಗಳು ಬಾಕಿ ಇದ್ದು, 3,987 ದೂರುಗಳು ಇತ್ಯರ್ಥವಾಗುವ ಪ್ರಕ್ರಿಯೆಯಲ್ಲಿವೆ. 2,535 ದೂರುಗಳಿಗೆ ದೀರ್ಘಕಾಲದ ಪರಿಹಾರ ನೀಡಬೇಕಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪಾಲಿಕೆಗ ಸಹಾಯವಾಣಿ 1,533 ಸಹಾಯವಾಣಿ ಹಾಗೂ ಸಹಾಯ 2.0 ತಂತ್ರಾಂಶ, ಆ್ಯಪ್‌ನಲ್ಲಿ ನಾಗರಿಕರು ದೂರು ನೀಡಬಹುದಾಗಿದೆ. ಇಂಟಿಗ್ರೇಟೆಡ್‌ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ (ಐಸಿಸಿಸಿ) ಕಾರ್ಯನಿರ್ವಹಿಸುವ ಸಿಬ್ಬಂದಿ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಿ ಕಾಲಮಿತಿಯೊಳಗಾಗಿ  ದೂರುಗಳನ್ನು ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದೆ.

ರಸ್ತೆ ನಿರ್ವಹಣೆಗೆ ಸಂಬಂಧಿಸಿದ ದೂರುಗಳೇ ಹೆಚ್ಚಾಗಿದೆ. ಆರೋಗ್ಯ, ವಿದ್ಯುತ್‌, ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ನಂತರದ ಸ್ಥಾನದಲ್ಲಿವೆ. 

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಆಗಸ್ಟ್‌ 26ರಂದು ಐಸಿಸಿಸಿಗೆ ಭೇಟಿ ನೀಡಿ, ‘ಸಹಾಯ ಹೆಸರಿನಲ್ಲಿ ಆ್ಯಪ್‌ ಮಾಡಿದರೆ ಸಾಲದು. ಸಕಾಲದಲ್ಲಿ ಜನರಿಗೆ ಪರಿಹಾರ ಸಿಗಬೇಕು. ಇದಕ್ಕಾಗಿ, ಬಿಬಿಎಂಪಿ ಆಡಳಿತಕ್ಕೆ ಚುರುಕು ನೀಡಬೇಕಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದರು. ಇದಾದ ಮೇಲೆ ಪ್ರಥಮ ಬಾರಿಗೆ ಎರಡು ವರ್ಷದಲ್ಲಿ ‘ಸಹಾಯ 2.0’ ಸೇರಿದಂತೆ ನಾಗರಿಕರು ದೂರುಗಳ ಮಾಹಿತಿಯನ್ನು ಬಿಬಿಎಂಪಿ ಅಧಿಕೃತವಾಗಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT