ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರಿಂದ ಓಲಾ, ಊಬರ್ Uninstall: ಆ್ಯಪ್‌ಗಳಷ್ಟೆ ಇವರೇ ಮಾಡ್ತಿದಾರೆ ಚಾರ್ಜ್‌

Last Updated 12 ಅಕ್ಟೋಬರ್ 2022, 11:12 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಆಟೊ ಸೇವೆಯನ್ನು ಇಂದಿನಿಂದಲೇ ಸಾರಿಗೆ ಇಲಾಖೆ ರದ್ದು ಮಾಡಿದೆ. ಬೆಂಗಳೂರಿನಲ್ಲಿ ಬಹುತೇಕ ಆಟೋ ಚಾಲಕರು ತಮ್ಮ ಮೊಬೈಲ್‌ನಲ್ಲಿಓಲಾ, ಊಬರ್ ಆ್ಯಪ್‌ಗಳನ್ನು Uninstall ಮಾಡಿದ್ದಾರೆ.

ಆದರೆ, ಅದೇ ಆಟೊ ಚಾಲಕರು ಓಲಾ, ಊಬರ್‌ನಷ್ಟೇ ಪ್ರಯಾಣಿಕರಿಗೆ ಚಾರ್ಜ್‌ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ಈ ಬಗ್ಗೆ ಪ್ರಜಾವಾಣಿ ಸ್ಥಳ ಸಮೀಕ್ಷೆ ನಡೆಸಿದಾಗ ಈ ಅಂಶ ಕಂಡು ಬಂದಿದೆ. ಸಾರಿಗೆ ಇಲಾಖೆ ಆದೇಶಕ್ಕೆ ಓಲಾ ಊಬರ್ ಆ್ಯಪ್‌ಗಳು ಕಿಮ್ಮತ್ತು ನೀಡಿಲ್ಲ ಎನ್ನುವುದು ತಿಳಿದು ಬಂದಿದೆ. ಈ ಎರಡೂ ಆ್ಯಪ್‌ಗಳಲ್ಲಿ ಗ್ರಾಹಕರು ಆಟೊ ಸೇವೆಯ ಕೋರಿಕೆಯನ್ನು ನೀಡಬಹುದು. ಆದರೆ, ಬಹುತೇಕ ಯಾವುದೇ ಆಟೊ ಚಾಲಕರು ಬುಕಿಂಗ್ ಕೋರಿಕೆಗಳನ್ನು ಸ್ವೀಕರಿಸುತ್ತಿಲ್ಲ.

ಓಲಾ, ಊಬರ್, ರಾಪಿಡೋ ಅಂತಹ ಪ್ರಮುಖ ಆ್ಯಪ್ ಆಧರಿತ ಆಟೊ ಸೇವೆ ಮೂಲಕ ಆ ಕಂಪನಿಗಳು ಜನರನ್ನು ಸುಲಿಗೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆ್ಯಪ್‌ ಮೂಲಕ ಆಟೊ ಸೇವೆ ನೀಡಿ ಆಟೋಗಳು ರಸ್ತೆಗಿಳಿದರೆ ಅಂತಹವರಿಗೆ ₹5000 ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಸಿತ್ತು.

ಈ ನಿಟ್ಟಿನಲ್ಲಿ ಇಂದು ಬೆಂಗಳೂರು ನಗರದ ಅನೇಕ ಕಡೆ ತಪಾಸಣೆ ಮಾಡಿದಾಗ ಇನ್ನೂ ಕೂಡ ಅನೇಕ ಆಟೊ ಚಾಲಕರು ಆ್ಯಪ್ ಆಧಾರಿಸಿ ಆಟೊ ಸೇವೆ ಬಿಟ್ಟರೂ ಕನಿಷ್ಠ ದರ ₹100 ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

‘ನಮ್ಮ ಏರಿಯಾದಲ್ಲಿ ಸಾಮಾನ್ಯ ಆಟೊ ಸೇವೆ ಅಪರೂಪ. ಹೀಗಾಗಿ ನಮಗೆ ಓಲಾ, ಊಬರ್ ಆಟೊ ಸೇವೆ ಅಚ್ಚುಮೆಚ್ಚು. ಹೀಗಾಗಿ ಇಂದು ಕೂಡ ಆ್ಯ‍ಪ್ ಆಧರಿಸಿ ಆಟೊ ಬುಕ್ ಮಾಡಿದೆ. ಆದರೆ, ಅವರು ಬುಕಿಂಗ್ ರದ್ದು ಮಾಡಿ ಓಲಾದವರು ತೆಗೆದುಕೊಳ್ಳುವಷ್ಟೇ ಹಣ ತೆಗೆದುಕೊಂಡರು’ ಎಂದು ಕನಕಪುರ ರಸ್ತೆಯ ಸರಿತಾ ಕಾರ್ತಿಕ್ ಅವರು ಹೇಳಿದ್ದಾರೆ.

‘ಕೆಲವು ಆಟೊ ಚಾಲಕರು ಸ್ವಯಂಪ್ರೇರಿತವಾಗಿ ಆ್ಯಪ್‌ನ್ನು ಡಿಲೀಟ್ ಮಾಡಿದ್ದಾರೆ. ಇದರಿಂದ ಕೆಲವರಿಗೆ ಆ್ಯಪ್ ಆಧರಿಸಿ ಆಟೊದಲ್ಲಿ ಹೋಗುವವರಿಗೆ ತೊಂದರೆ ಆಗಿದೆ. ಸಾಮಾನ್ಯ ಆಟೊ ಸೇವೆಗಿಂತ ಆ್ಯಪ್ ಆಧರಿಸಿದ ಆಟೊ ಸೇವೆಯೇ ಅತ್ಯುತ್ತಮ. ಇಂದು ನನಗೆ ಆ್ಯಪ್‌ನಲ್ಲಿ ಆಟೊ ಬುಕ್ ಮಾಡಿದರೂ ಆಟೊ ಸಿಗಲಿಲ್ಲ’ ಎಂದು ವೈಟ್‌ಫಿಲ್ಡ್‌ನ ಬಿಬಿಕಾ ಶರ್ಮಾ ಹೇಳುತ್ತಾರೆ.

ಹಾಗೆಯೇ ಕೆಲವು ಆಟೊ ಚಾಲಕರು, ‘ಆ್ಯಪ್ ಆಧರಿಸಿ ಆಟೊ ಸೇವೆ ರದ್ದು ಮಾಡಿರುವುದು ಸರಿಯಲ್ಲ, ಬದಲಿ ಮಾರ್ಗ ಕಂಡುಕೊಳ್ಳಬಹುದಿತ್ತು. ಆ್ಯಪ್ ಆಧರಿತ ಆಟೊ ಸೇವೆ ಮನೆ ಬಾಗಿಲಿಗೇ ನೀಡುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಸರ್ಕಾರವೇ ಈ ರೀತಿ ಆ್ಯಪ್ ಮಾಡಿ ಆಟೊದವರಿಗೆ ಒದಗಿಸಬೇಕು’ ಎಂದು ಅನೇಕ ಚಾಲಕರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT