ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 16ರವರೆಗೂ ಅವಕಾಶವಿದೆ.

ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗ, ವಿದೇಶಿ ಭಾಷೆಗಳು ಸೇರಿದಂತೆ 20 ವಿಷಯಗಳಿಗೆ ಪ್ರವೇಶ ಪಡೆಯಬಹುದು. ₹250 ದಂಡ ಶುಲ್ಕದೊಂದಿಗೆ ಪ್ರವೇಶ ಪಡೆಯಲು
ಆ. 22 ಕೊನೆಯ ದಿನ.

ಕಲಾ ವಿಭಾಗದಲ್ಲಿ ಎಂ.ಎ ಕನ್ನಡ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಜಪನೀಸ್ ಭಾಷೆಗಳು ಹಾಗೂ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಕಾರ್ಯ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ನಗರ ಅಧ್ಯಯನ ಮತ್ತು ಯೋಜನೆ ವಿಷಯಗಳಿವೆ.

ವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೈವಿಕ ರಸಾಯನ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಫ್ಯಾಷನ್ ಮತ್ತು ಉಡುಪು ವಿನ್ಯಾಸ ಹಾಗೂ ಗಣಕ ವಿಜ್ಞಾನ ಕೋರ್ಸ್ಗಳಿವೆ.

ವಾಣಿಜ್ಯ ವಿಭಾಗದಲ್ಲಿ ಎಂ.ಕಾಂ ಸಾಮಾನ್ಯ, ಹಣಕಾಸು ವಿಶ್ಲೇಷಣೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕೋರ್ಸ್ ಲಭ್ಯವಿದೆ. ಇದಲ್ಲದೆ ಸ್ವಯಂ ಹಣಕಾಸು ನಿರ್ವಹಣೆಯ ಪಿಜಿ ಡಿಪ್ಲೊಮಾ (ವಾಣಿಜ್ಯ ಆಡಳಿತ, ಮಾನವ ಸಂಪನ್ಮೂಲ, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಫೈನಾನ್ಸ್ ಮ್ಯಾನೇಜ್ಮೆಂಟ್) ಸಂಜೆ ತರಗತಿಗಳ ಪ್ರವೇಶಕ್ಕೂ ಅವಕಾಶವಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭವಾಗಿರುವ ಬ್ಯಾಟರಾಯನಪುರ- ಬಾಗಲೂರು ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ (ಸಾಮಾನ್ಯ) ಹಾಗೂ ಬಿಸಿಎ ಮತ್ತು ಬಿ.ಕಾಂ ಪದವಿ ಕೋರ್ಸ್ಗಳು ಲಭ್ಯ ಇವೆ. ಈ ಶೈಕ್ಷಣಿಕ ವರ್ಷದಿಂದ ಎಂಸಿಎ ಕೋರ್ಸ್ ಸಹ ಪ್ರಾರಂಭಿಸ ಲಾಗುತ್ತಿದ್ದು ಪಿಜಿಸಿಇಟಿ ಮೂಲಕ ಪ್ರವೇಶ ಪಡೆಯಬಹುದಾಗಿದೆ ಎಂದು ಬಿಸಿಯು ಕುಲಸಚಿವ ನವೀನ್ ಜೋಸೆಫ್ ತಿಳಿಸಿದ್ದಾರೆ.

ವಿವರಗಳಿಗೆ ವಿ.ವಿ. ವೆಬ್ಸೈಟ್ www.bcu.ac.in ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.