16ನೇ ಸಂಗೀತೋತ್ಸವ 7ಕ್ಕೆ

ಬೆಂಗಳೂರು: ಶ್ರೀ ಗುರು ಗಾನಲಹರಿ ಸಂಗೀತ ಅಕಾಡೆಮಿಯಿಂದ ಫೆ.7ರಂದು ಮಧ್ಯಾಹ್ನ 3ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 16ನೇ ಸಂಗೀತೋತ್ಸವ ಹಮ್ಮಿಕೊಂಡಿದೆ.

ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಗಾಯಕರಾದ ವಾಗೀಶ್ ಭಟ್ ಹಾಗೂ ಪ್ರಭುರಾವ್ ಸೊನ್ನ ಅವರಿಗೆ ‘ಪುಟ್ಟಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ತಬಲಾ ವಾದಕ ಸತೀಶ್ ಹಂಪಿಹೊಳಿ, ಕಥಕ್ ನೃತ್ಯಗಾರ್ತಿ ಪೂರ್ಣಾ ಆಚಾರ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ವಾಗೀಶ್ ಭಟ್ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ, ಪ್ರಭುರಾವ್ ಸೊನ್ನ ಅವರು ಸುಗಮ ಸಂಗೀತ ಕಛೇರಿ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ 7ರಂದು

ಬೆಂಗಳೂರು: ವಿಶ್ವಪಥ ಕಲಾ ಸಂಗಮ ತಂಡದಿಂದ ಫೆ. 7ರಂದು ಎನ್.ಆರ್. ಕಾಲೊನಿಯ ಡಾ.ಸಿ. ಅಶ್ವತ್ಥ್ ಕಲಾಭವನದಲ್ಲಿ ಸಂಜೆ 7 ಗಂಟೆಗೆ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನವಾಗಲಿದೆ.

ರಾಜೇಂದ್ರ ಕಾರಂತ ಅವರು ಈ ನಾಟಕವನ್ನು ರಚಿಸಿದ್ದು, ಬಿ. ಅಶೋಕ್ ಅವರು ನಿರ್ದೇಶಿಸಿದ್ದಾರೆ.

ಭರತನಾಟ್ಯ ರಂಗಪ್ರವೇಶ 8ಕ್ಕೆ

ಬೆಂಗಳೂರು: ಸುಕೃತಿ ನಾಟ್ಯಾಲಯದಿಂದ ಫೆ. 8ರಂದು ಹೊಂಬೇಗೌಡನಗರದ ಪ್ರಭಾತ್ ಕಲಾ ಸಂಭ್ರಮ ಸಭಾಂಗಣದಲ್ಲಿ ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ವೈಷ್ಣವಿ ಆಚಾರ್ಯ ಅವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ಸುಕೃತಿ ನಾಟ್ಯಾಲಯದ ನಿರ್ದೇಶಕಿ ಹೇಮಾ ಪ್ರಭಾತ್, ವಾಗ್ಮಿ ಕೆ.ಪಿ. ಪುತ್ತೂರಾಯ, ಕಲಾವಿದೆ ವೈಜಯಂತಿ ಕಾಶಿ, ಯೋಗ ಶಿಕ್ಷಕಿ ವನಿತಕ್ಕ, ಸಮರ್ಪಣಾ ಭರತನಾಟ್ಯ ಮತ್ತು ಸಂಗೀತ ಶಾಲೆಯ ನಿರ್ದೇಶಕಿ ಗಾರ್ಗಿ ಪಂಚಾಂಗಂ, ಸಂಸ್ಕೃತ ಪಂಡಿತ ಕೃಷ್ಣರಾಜ ಕುತ್ಪಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 98800 01307.

‘ಶೂರ್ಪನಖಿ’ ನಾಟಕ ಪ್ರದರ್ಶನ 10ಕ್ಕೆ

ಬೆಂಗಳೂರು: ‘ಶೂರ್ಪನಖಿ’ ನಾಟಕ ಫೆ.10ರಂದು ಸಂಜೆ 7.30ಕ್ಕೆ ಜೆ.ಪಿ. ನಗರದಲ್ಲಿರುವ ರಂಗ ಶಂಕರದಲ್ಲಿ ಪ್ರದರ್ಶನವಾಗಲಿದೆ.

ಅಪೂರ್ವ ಕಾಸರವಳ್ಳಿ ಅವರು ಈ ನಾಟಕವನ್ನು ರಚಿಸಿದ್ದು, ವಂದನಾ ಸುಪ್ರಿಯಾ ಕಾಸರವಳ್ಳಿ ಅವರು ನಿರ್ದೇಶನ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ: 78995 49696.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.