ಬೆಂಗಳೂರು: ಕನಕಪುರ ರಸ್ತೆಯ ವಾಜರಹಳ್ಳಿ ವ್ಯಾಪ್ತಿಯಲ್ಲಿರುವ 2.7 ಕಿ.ಮೀ ಉದ್ದವಿರುವ ಹಾಲಿಡೇ ವಿಲೇಜ್ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಸುತ್ತಮುತ್ತಲಿನ ನೂರಾರು ನಿವಾಸಿಗಳು ಭಾನುವಾರ ಸಮೀಪದ ದೇವಸ್ಥಾನವೊಂದರಲ್ಲಿ ‘ಗಣ ಹೋಮ’ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲು ನಿವಾಸಿಗಳು ಮುಂದಾಗಿದ್ದರು. ಆದರೆ, ಸ್ವಾತಂತ್ರ್ಯಉದ್ಯಾನದಲ್ಲಿ ಮಾತ್ರ ಪ್ರತಿಭಟನೆಗೆ ಅನುಮತಿ ಇದ್ದಿದ್ದರಿಂದ ಪ್ರತಿಭಟನೆ ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಹಾಲಿಡೇ ವಿಲೇಜ್ ರಸ್ತೆಯಲ್ಲಿರುವ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ‘ಗಣ ಹೋಮ’ ಪೂಜೆಯೊಂದಿಗೆ ‘ಬಿಬಿಎಂಪಿಯವರು ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಿ’ ಎಂದು ಪ್ರಾರ್ಥಿಸುವ ಮೂಲಕ ನಿವಾಸಿಗಳು ಪ್ರತಿಭಟನೆಗೆ ನಿರ್ಧರಿಸಿದ್ದರು. ‘ರಾಜಕೀಯ ಒತ್ತಡ’ದಿಂದಾಗಿ ಆ ಗಣ ಹೋಮ ಪೂಜೆಯನ್ನೂ ಮುತ್ತೂರಾಯ ದೇವಸ್ಥಾನಕ್ಕೆ ವರ್ಗಾಯಿಸಲಾಯಿತು’ ಎಂದು ನಿವಾಸಿಗಳು ತಿಳಿಸಿದರು.

‘15 ಸಾವಿರಕ್ಕೂ ಹೆಚ್ಚು ಮಂದಿ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಈ ಬಡಾವಣೆ ಬಿಬಿಎಂಪಿಗೆ ಒಳಪಟ್ಟಾಗಿನಿಂದಲೂ ರಸ್ತೆ ದುರಸ್ತಿಯಾಗಿಲ್ಲ. ಕಾವೇರಿ ನೀರಿನ ಕೊಳವೆಗಳಿಗಾಗಿ, ವಿದ್ಯುತ್ ತಂತಿಗಳನ್ನು ಅಳವಡಿಸುವುದಕ್ಕಾಗಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ವಾಹನಗಳು ಸಂಚರಿಸಿದಾಗ ದೂಳು ಏಳುತ್ತದೆ. ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತದೆ. ಈ ಭಾಗದಲ್ಲಿರುವ ಪೂರ್ವ ಹೈಲ್ಯಾಂಡ್, ಮಾಲ್ಗುಡಿ ಮತ್ತು ಗೋದ್ರೇಜ್ ಎಟರ್ನಿಟಿಯಂತಹ ಅಪಾರ್ಟ್ಮೆಂಟ್ ನಿವಾಸಿಗಳು, ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು, ರಸ್ತೆಯಲ್ಲಿ ಸಂಚರಿಸಲು ಹರಸಾಸಹಪಡುತ್ತಾರೆ’ ಎಂದು ನಿವಾಸಿಗಳು ದೂರಿದರು.

‘ಈ ರಸ್ತೆ ನಡೆದಾಡಲೂ ಯೋಗ್ಯವಾಗಿಲ್ಲ. ಆಟೊ ಚಾಲಕರು 3 ಕಿ.ಮೀಗೆ ₹180 ಕೇಳುತ್ತಾರೆ’ ಎಂದು ಸ್ಥಳೀಯ ನಿವಾಸಿ ಸರೋಜ ದೂರಿದರು. ‘ಪ್ರತಿದಿನ ಈ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ತನ್ನ ಮಗಳು ಇತ್ತೀಚೆಗೆ ಸ್ಕೂಟರ್ನಿಂದ ಬಿದ್ದು ಗಾಯಗೊಂಡಿದ್ದನ್ನು ವಾಣಿ ಹೆಗಡೆ ನೆನಪಿಸಿಕೊಂಡರು. ‘ಮಳೆಗಾಲದಲ್ಲಿ ಕೆಸರಾಗುವ ರಸ್ತೆಯಿಂದಾಗಿ ಶಾಲಾ ಬಸ್ ಅಪಘಾತಕ್ಕೀಡಾಗಿದೆ' ಎಂದು ವಕೀಲ ಪ್ರದೀಪ್ ಶೆಣೈ ಹೇಳಿದರು.

‘ಇದನ್ನು ರಸ್ತೆ ಎನ್ನುವುದಕ್ಕೆ ಸಾಧ್ಯವಿಲ್ಲ, ಗುಡ್ಡಗಾಡು ಪ್ರದೇಶ(ಆಫ್ ರೋಡ್) ತರಹ ಇದೆ’ ಎಂದು ನಿವಾಸಿ ಗೌತಮ್ ಕಾಮತ್ ಬೇಸರ ವ್ಯಕ್ತಪಡಿಸಿದರು. ‘ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಸುಳಿವು ಸಿಕ್ಕ ಕಾರಣ, ಹಿಂದಿನ ದಿನ ರಾತ್ರಿ ಕೆಲವು ಕಡೆ ಕಾಂಕ್ರೀಟ್ ಹಾಕಿ, ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ತೋರಿಸಲು ಪ್ರಯತ್ನಿಸಿದ್ದಾರೆ’ ಎಂದು ದೂರಿದರು. ‘ಇತ್ತೀಚೆಗೆ ರಸ್ತೆಯಲ್ಲಿ ವೈಟ್ಟಾಪಿಂಗ್ ಕಾಮಗಾರಿ ಆರಂಭಿಸುವುದಕ್ಕಾಗಿ ಭೂಮಿ ಪೂಜೆ ಮಾಡಲಾಗಿದೆ. ಕಾಮಗಾರಿ ಇನ್ನೂ ಶುರುವಾಗಬೇಕಿದೆ’ ಎಂದು ಗೌತಮ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.