ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸದಾಗಿ ವಾಯವ್ಯ, ನೈರುತ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಭಾಗಗಳನ್ನು ಸೃಜಿಸಲಾಗಿದೆ. ಇದುವರೆಗೂ ಎಂಟು ವಿಭಾಗಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಈಗ ಅವುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಸದ್ಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ, ವೈಟ್ಫೀಲ್ಡ್, ಆಗ್ನೇಯ ಹಾಗೂ ಈಶಾನ್ಯ ವಿಭಾಗಗಳಿದ್ದವು. ಇದೀಗ ನಗರ ಪೊಲೀಸ್ ಘಟಕಕ್ಕೆ ವಾಯವ್ಯ, ನೈರುತ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ಹೊಸ ವಿಭಾಗಗಳು ಸೇರ್ಪಡೆ ಆಗಿವೆ.

ಮೂರು ಹೊಸ ವಿಭಾಗಗಳನ್ನು ಸೃಜಿಸಲಾಗುವುದು 2025ರ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಭರವಸೆ ನೀಡಿದ್ದರು. ಅವರ ಸೂಚನೆಯಂತೆ ಮೂರು ಹೊಸ ವಿಭಾಗಗಳನ್ನು ಸೃಜಿಸಿ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್.ವನಜಾ ಅವರು ಆದೇಶಿಸಿದ್ದಾರೆ.

ನಗರವು ಮಾಹಿತಿ ಮತ್ತು ತಂತ್ರಜ್ಞಾನದ ಪ್ರತಿಷ್ಠಿತ ಕೇಂದ್ರ. ದೇಶದ ನಾನಾ ಭಾಗಗಳಿಂದ ಉದ್ಯೋಗವನ್ನು ಅರಸಿ ನಾಗರಿಕರು ನಗರಕ್ಕೆ ಬರುತ್ತಿದ್ದಾರೆ. ನಗರವು ಎಲ್ಲ ದಿಕ್ಕಿನಲ್ಲೂ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ನಗರೀಕರಣದ ಜತೆಗೆ ಅಪರಾಧ ಪ್ರಕರಣಗಳೂ ಹೆಚ್ಚುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು, ಕಳ್ಳತನ ಪ್ರಕರಣಗಳು ಹಾಗೂ ಸೈಬರ್ ಅಪರಾಧ ಪ್ರಕರಣಗಳು ನಗರದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಮೂರು ಪೊಲೀಸ್ ವಿಭಾಗ ಸೃಜಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಹಾಗೂ ಐಜಿಪಿ) ಕಳೆದ ವರ್ಷ ಪ್ರಸ್ತಾವ ಸಲ್ಲಿಸಿದ್ದರು.

2008ರ ಅಂತ್ಯದವರೆಗೆ ನಗರದಲ್ಲಿ ಜನಸಂಖ್ಯೆ ಮತ್ತು ಅಪರಾಧ ಪ್ರಕರಣಗಳಿಗೆ ಅನುಸಾರವಾಗಿ ಐದು ಕಾನೂನು ಸುವ್ಯವಸ್ಥೆ ವಿಭಾಗಗಳು ಹಾಗೂ ಎರಡು ಸಂಚಾರ ವಿಭಾಗಗಳು ಮಾತ್ರ ಅಸ್ತಿತ್ವದಲ್ಲಿದ್ದವು. ನಗರದ ವ್ಯಾಪ್ತಿ ಕ್ರಮೇಣ ವಿಸ್ತಾರವಾದ ಕಾರಣದಿಂದ ನಗರ ಪೊಲೀಸ್ ಘಟಕದಲ್ಲಿ 8 ಕಾನೂನು ಮತ್ತು ಸುವ್ಯವಸ್ಥೆ ಮತ್ತು ನಾಲ್ಕು ಸಂಚಾರ ವಿಭಾಗಳು ಕಾರ್ಯ ನಿರ್ವಹಿಸುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.