ಬೆಂಗಳೂರು: ನಗರದ ಚಾಮರಾಜಪೇಟೆಯಏಳು ವರ್ಷದಪುನರ್ವ ಚಂದ್ರಮೌಳಿರೂಬಿಕ್ಸ್ ಕ್ಯೂಬ್ ಜೋಡಣೆಯಲ್ಲಿಇಂಟರ್‌ನ್ಯಾಷನಲ್, ಏಷಿಯಾ ಮತ್ತುಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗಳಲ್ಲಿ ದಾಖಲೆ ಬರೆದಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಅತಿ ವೇಗವಾಗಿರೂಬಿಕ್ಸ್ ಕ್ಯೂಬ್ ಜೋಡಣೆಯಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್,31 ನಿಮಿಷಗಳಲ್ಲಿ 35 ಬಗೆಯ ರೂಬಿಕ್ಸ್ ಕ್ಯೂಬ್ ಜೋಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷಿಯಾ ಬುಕ್ ಆಫ್ ರೆಕಾರ್ಡ್ಸ್‌ಗಳಿಗೆ ಸೇರ್ಪಡೆಯಾಗಿದ್ದಾರೆ.
ಕೆ.ಅರುಣಾ ಮತ್ತು ಪಿ.ಜಿ.ಚಂದ್ರಮೌಳಿ ದಂಪತಿಯ ಪುತ್ರಿಯಾಗಿರುವ ಪುನರ್ವ, ರಿಚ್‌ಮಂಡ್ ವೃತ್ತದಲ್ಲಿರುವ ಬಾಲ್ಡ್‌ವಿನ್ ಬಾಲಕಿಯ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಶ್ಲೋಕ ಪಠಿಸುವುದು, ಸ್ಕೇಟಿಂಗ್, ಈಜು, ನೃತ್ಯದಲ್ಲಿ ಆಸಕ್ತಿ ಹೊಂದಿರುವ ಪುನರ್ವ ನಗರದ ಬ್ರೇನ್ ಸ್ಟುಡಿಯೊ ಸಂಸ್ಥೆಯ ಶ್ರೀನಿವಾಸ ಮೂರ್ತಿ ಅವರಿಂದರೂಬಿಕ್ಸ್ ಕ್ಯೂಬ್ ಜೋಡಣೆಯ ತರಬೇತಿ ಪಡೆದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.