ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ₹13.71 ಕೋಟಿ ಮೌಲ್ಯದ 4.04 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕು ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಗುಂಡುತೋಪು, ರಾಜಕಾಲುವೆ, ಸ್ಮಶಾನ ಜಾಗಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದ್ದಾರೆ.

ದಾಸನಪುರ ಹೋಬಳಿಯ ಬೈಲುಕೋನೇನಹಳ್ಳಿ ಗ್ರಾಮದಲ್ಲಿ ₹5 ಕೋಟಿ ಮೌಲ್ಯದ 1.04 ಎಕರೆ ಗುಂಡುತೋಪು, ವರ್ತೂರು ಹೋಬಳಿಯ ಹರಳೂರು ಗ್ರಾಮದಲ್ಲಿ ₹4.40 ಕೋಟಿ ಮೌಲ್ಯದ 22 ಗುಂಟೆ ಗುಂಡುತೋಪು, ಬಿದರಹಳ್ಳಿ ಹೋಬಳಿ ದೊಡ್ಡಗುಬ್ಬಿ ಗ್ರಾಮದಲ್ಲಿ ₹1 ಕೋಟಿ ಮೌಲ್ಯದ 2 ಗುಂಟೆ ಗುಂಡುತೋಪು, ಅತ್ತಿಬೆಲೆ ಹೋಬಳಿಯ ವೀರಸಂದ್ರ ಗ್ರಾಮದಲ್ಲಿ ₹18 ಲಕ್ಷ ಮೌಲ್ಯದ 4 ಗುಂಟೆ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ.

ತಾವರಕೆರೆ ಹೋಬಳಿ ಮಾರೇನಹಳ್ಳಿ ಗ್ರಾಮದಲ್ಲಿ ₹66 ಲಕ್ಷ ಮೌಲ್ಯದ 22 ಗುಂಟೆ ಗುಂಡುತೋಪು, ನಾಗನಹಳ್ಳಿ ಗ್ರಾಮದಲ್ಲಿ ₹ 57 ಲಕ್ಷ ಮೌಲ್ಯದ 19 ಗುಂಟೆ ಗುಂಡುತೋಪು ಹಾಗೂ ₹ 1.38 ಕೋಟಿ ಮೌಲ್ಯದ 1.06 ಗುಂಟೆ, ದಾಸನಪುರ ಹೋಬಳಿಯ ಸೊಂಡೇಕೊಪ್ಪ ಗ್ರಾಮದಲ್ಲಿ ₹52 ಲಕ್ಷ ಮೌಲ್ಯದ 5 ಗುಂಟೆ ಜಾಗವನ್ನು ತೆರವು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.