ಬೆಂಗಳೂರು: ‘ಉದ್ಯಮ ಪ್ರಾರಂಭಿಸುವವರಿಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಈ ನಗರವು ಜಾಗತಿಕ ಆವಿಷ್ಕಾರ ಕೇಂದ್ರವಾಗಿ ಹೊರಹೊಮ್ಮಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಐಕ್ಯು ವೆಂಚರ್ಸ್ ವತಿಯಂದ ಹೊಸೂರು ರಸ್ತೆಯಲ್ಲಿ ಮಡಿವಾಳ ಸಂಚಾರ ಪೊಲೀಸ್ ಠಾಣೆ ಎದುರು ನವೋದ್ಯಮಿಗಳಿಗಾಗಿ ನಿರ್ಮಿಸಲಾಗಿರುವ ‘ಸ್ಟಾರ್ಟ್ಅಪ್ ಪಾರ್ಕ್’ ಉದ್ಘಾಟಿಸಿ, ಮಾತನಾಡಿದರು.

‘ಕರ್ನಾಟಕವು ಅವಕಾಶಗಳ ಸಾಗರವಾಗಿದ್ದು, ತಂತ್ರಜ್ಞಾನವಲ್ಲದೆ ಹಲವು ಉದ್ಯಮಗಳಿಗೆ ಸಾಕಷ್ಟು ಅವಕಾಶಗಳು ಇಲ್ಲಿವೆ. ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು, ಯಶಸ್ಸು ಸಾಧಿಸಬೇಕು’ ಎಂದರು.

ಐಕ್ಯು ವೆಂಚರ್ಸ್ ಸಂಸ್ಥಾಪಕ ಶಫಿ ಶೌಕತ್, ‘ಬೆಂಗಳೂರು ನವೋದ್ಯಮಗಳಿಗೆ ಉತ್ತಮ ತಾಣ. ಈ ಸ್ಟಾರ್ಟ್ ಅಪ್ ಪಾರ್ಕ್ ಕರ್ನಾಟಕದ ಬೆಳವಣಿಗೆಗೆ ಎಂಜಿನ್ ಆಗಲಿದೆ. ಉದ್ಯೋಗ ಸೃಷ್ಟಿಯ ಜತೆಗೆ ಉದ್ಯಮಿಗಳು ಮತ್ತು ಹೂಡಿಕೆದಾರರು ಒಟ್ಟಿಗೆ ಕೆಲಸ ಮಾಡುವ ವೇದಿಕೆ ಇದಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನವೋದ್ಯಮಿಗಳಿಗೆ ಅಗತ್ಯ ಮೂಲಸೌಕರ್ಯದ ಜತೆಗೆ ನವೋದ್ಯಮ ಶಾಲೆ, ಹೂಡಿಕೆದಾರರ ಸ್ಟುಡಿಯೊ, ಮಾರ್ಗದರ್ಶನ ಕೇಂದ್ರ, ಕಾರ್ಯಕ್ರಮಗಳಿಗೆ ಸ್ಥಳಾವಕಾಶ, ಗ್ರಂಥಾಲಯ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ ಹೊಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.