ಭಾನುವಾರ, ಆಗಸ್ಟ್ 14, 2022
19 °C

ಮೆಮು, ಡೆಮು ರೈಲು ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‌ಕೊರೊನಾ ಸೋಂಕು ಮತ್ತು ಲಾಕ್‌ಡೌನ್ ಕಾರಣದಿಂದ ಒಂಬತ್ತು ತಿಂಗಳಿಂದ ಸ್ಥಗಿತಗೊಂಡಿದ್ದ ಕಾಯ್ದಿರಿಸದ ರೈಲುಗಳ ಸೇವೆ ಸೋಮವಾರ ಪುನರಾರಂಭಗೊಂಡಿತು.

ಪ್ರಾಯೋಗಿಕವಾಗಿ ಆರು ಜೋಡಿ ಮೆಮು ಮತ್ತು ಡೆಮು ಕಾಯ್ದಿರಿಸದ ರೈಲುಗಳನ್ನು ಹತ್ತು ದಿನಗಳ ಅವಧಿಗೆ (ಡಿ. 17ರವರೆಗೆ) ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆ ಮೈಸೂರು- ಬಂಗಾರಪೇಟೆ ನಡುವೆ ಮೊದಲ ರೈಲು ಸೇವೆ ಆರಂಭಗೊಂಡಿತು.

ಕೆಎಸ್‌ಆರ್‌ ನಿಲ್ದಾಣದಿಂದ ಹೊಸೂರು, ಯಶವಂತಪುರದಿಂದ ತುಮಕೂರು, ಕೆಎಸ್‌ಆರ್ ನಿಲ್ದಾಣದಿಂದ ಮಾರಿಕುಪ್ಪಂ, ಯಶವಂತಪುರ– ಹಿಂದೂಪುರ ಮತ್ತು ಯಶವಂತಪುರದಿಂದ ಹಾಸನಕ್ಕೆ ಮೆಮು ಮತ್ತು ಡೆಮು ಪ್ರಯಾಣಿಕರ ಕಾಯ್ದಿರಿಸದ ರೈಲುಗಳ ಕಾರ್ಯಾಚರಣೆಗೊಳ್ಳಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಮಾರ್ಚ್ ಅಂತ್ಯದಲ್ಲಿ ಕೊರೊನಾ ಕಾರಣದಿಂದ ಕಾಯ್ದಿರಿಸದ ರೈಲು ಸಂಚಾರ ಸ್ಥಗಿತಗೊಂಡಿತ್ತು. ಈ ಮಧ್ಯೆ ಲಾಕ್‌ಡೌನ್ ಬಳಿಕ ಕಾಯ್ದಿರಿಸುವ ರೈಲುಗಳ ಸೇವೆ ಶುರುವಾಗಿತ್ತು.

ಮೊದಲ ದಿನ ಪ್ರಯಾಣಿಕರ ಸಂಖ್ಯೆ ತುಸು ವಿರಳ ಇತ್ತು. ಜನ ಸರದಿಯಲ್ಲಿ ನಿಂತು ಟಿಕೆಟ್ ಪಡೆದು ಪ್ರಯಾಣಿಸಿದರು. ಸಂಸದ ಪಿ.ಸಿ. ಮೋಹನ್ ನಿಲ್ದಾಣಕ್ಕೆ ತೆರಳಿ, ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಅಲ್ಲದೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸುವುದರ ಜತೆಗೆ ಜಾಗೃತಿ ಮೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು