ಶನಿವಾರ ಸಂಜೆ 4.11ಕ್ಕೆ ವಿದ್ಯುತ್ ಪೂರೈಕೆಯಲ್ಲಿ ವೈಫಲ್ಯ ಕಂಡುಬಂತು. ಇದರಿಂದ ಹಸಿರು ಮಾರ್ಗದಲ್ಲಿ ಮೆಟ್ರೊ ರೈಲುಗಳು ಬೇರೆ ಬೇರೆ ನಿಲ್ದಾಣಗಳಲ್ಲಿ ನಿಂತವು. ರಾಜಾಜಿನಗರ–ನಾಗಸಂದ್ರ ಮತ್ತು ನ್ಯಾಷನಲ್ ಕಾಲೇಜು–ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಶಾರ್ಟ್‌ಲೂಪ್ ಸಂಚಾರ ಆರಂಭಿಸಲಾಯಿತು. ರಾಜಾಜಿನಗರದಿಂದ ನ್ಯಾಷನಲ್ ಕಾಲೇಜಿನವರೆಗೆ ಮೆಟ್ರೊ ರೈಲು ಇಲ್ಲದೇ ಕೆಲಹೊತ್ತು ಪ್ರಯಾಣಿಕರು ಪರದಾಡಿದರು.