ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ವಿಶ್ವವಿದ್ಯಾಲಯದಲ್ಲೂ ಪಠ್ಯಪುಸ್ತಕಗಳ ಕೊರತೆ

Last Updated 8 ಜುಲೈ 2022, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಿವಿಧ ಪದವಿ ತರಗತಿ
ಗಳ ಎರಡನೇ ಸೆಮಿಸ್ಟರ್‌ ಆರಂಭವಾಗಿ ಒಂದು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಲಭ್ಯವಾಗಿಲ್ಲ.

ಈ ಬಗ್ಗೆ ವಿಶ್ವವಿದ್ಯಾಲಯದ ‘ಅಂತರ
ಗಂಗೆ– ಕನ್ನಡ ಅಧ್ಯಾಪಕರ ಸಂಘ’ ಶುಕ್ರವಾರ ಕುಲಪತಿ ಅವರಿಗೆ ಮನವಿ ಸಲ್ಲಿಸಿ, ಪಠ್ಯಪುಸ್ತಕಗಳ ಕೊರತೆಯ ಬಗ್ಗೆ ಗಮನಸೆಳೆದಿದೆ.

‘2022ನೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪಠ್ಯ
ಕ್ರಮ ಹಾಗೂ ಪುಸ್ತಕವನ್ನು ಕನ್ನಡ ಅಧ್ಯ
ಯನ ಮಂಡಳಿಯ ಡಾ.ಬಿ. ಗಂಗಾಧರ್‌ ಅವರ ನೇತೃತ್ವದಲ್ಲಿ ಕನ್ನಡ ಪಠ್ಯಗಳನ್ನು ರೂಪಿಸಿ ಈಗಾಗಲೇ ಹಸ್ತಾಂತರಿಸಿದ್ದಾರೆ.
ಮೊದಲನೇ ಸೆಮಿಸ್ಟರ್‌ನಲ್ಲಿ ಪಠ್ಯಪುಸ್ತಕಗಳಿಲ್ಲದೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಎರಡನೇ ಸೆಮಿಸ್ಟರ್‌ ಆರಂಭವಾಗಿ ಒಂದು ತಿಂಗಳು ಕಳೆ
ದರೂ ಪಠ್ಯಪುಸ್ತಕವು ವಿದ್ಯಾರ್ಥಿಗಳ ಕೈಸೇರುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ’ ಎಂದು ಉಲ್ಲೇಖಿಸಿದೆ.

'ಬೆಂಗಳೂರು ಉತ್ತರ ವಿ.ವಿಯಲ್ಲಿ ಪ್ರಥಮ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿ
ಗಳು ಆತಂಕದಲ್ಲಿದ್ದಾರೆ. ಅತಿ ಶೀಘ್ರ ಕನ್ನಡ ಪಠ್ಯಪುಸ್ತಕಗಳನ್ನು ಮುದ್ರಿಸಿ ಎಲ್ಲ
ರಿಗೂ ತಲುಪುವಂತೆ ಕ್ರಮ ಕೈಗೊಳ್ಳ
ಬೇಕು' ಎಂದು ಸಂಘವು ಕೋರಿದೆ.

‘2022–23ನೇ ಸಾಲಿಗೆ ಸಂಬಂಧ
ಪಟ್ಟ ಮೂರು, ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಪಠ್ಯಪುಸ್ತಕವನ್ನು ಸಿದ್ಧಪಡಿಸುವ ಕಾರ್ಯವನ್ನು ತಕ್ಷಣ ಕೈಗೊಳ್ಳದಿದ್ದಲ್ಲಿ
ಪುನಃ ಇಂತಹದ್ದೇ ಆತಂಕದ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT