ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ಫಿನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ‘ಫಿನಿಕ್ಸ್ ಇಂಡಿಯಾ ಲೈಟ್ ಫೆಸ್ಟಿವಲ್ (ಐಎಲ್ಎಫ್)’ ಪ್ರಾರಂಭವಾಗಿದೆ.

ಮಾಲ್ನ ದಕ್ಷಿಣ ವಲಯದ ಮಾರುಕಟ್ಟೆ ನಿರ್ದೇಶಕಿ ರೀತು ಮೆಹ್ತಾ ಮಾತನಾಡಿ, ‘ಮಾಲ್ನಲ್ಲಿ ಬಣ್ಣ, ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅನಿಮೇಟೆಡ್ ಕಿರಣಗಳು ಮತ್ತು ಪ್ರಜ್ವಲಿಸುವ ದೀಪಗಳ ಚಿತ್ತಾರ ನೋಡಗರನ್ನು ಸೆಳೆಯುತ್ತಿದೆ. ಐಎಲ್ಎಫ್ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಇದು ಅದ್ಭುತ ಅನುಭವ ನೀಡುತ್ತದೆ. ಇದು ಕಲೆ, ತಂತ್ರಜ್ಞಾನದ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ಫಿನಿಕ್ಸ್ ಮಾಲ್ಗೆ ಭೇಟಿ ನೀಡುವ ಪ್ರತಿಯೊಬ್ಬರು ಬೆಳಕಿನ ಈ ಚಿತ್ತಾರವನ್ನು ಕಣ್ತುಂಬಿಕೊಳ್ಳಬಹುದು’ ಎಂದು ತಿಳಿಸಿದ್ದಾರೆ.

ಪ್ರವೇಶ ಉಚಿತವಾಗಿದ್ದು, ಕುಟುಂಬ ಸಮೇತ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು. ಹಬ್ಬದ ಅಂಗವಾಗಿ ಮಾಡಿರುವ ಚಿತ್ತಾಕರ್ಷಣೆಯ ವಿನ್ಯಾಸ ವಿಶಿಷ್ಟ ಅನುಭವ ನೀಡಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.