ಬೆಂಗಳೂರು: ಮನೆಯ ಎದುರು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಕಾಲಿನಿಂದ ಒದ್ದಿದ್ದ ಆರೋಪಿಯನ್ನು ಬನಶಂಕರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ರಂಜನ್ (35) ಬಂಧಿತ ಆರೋಪಿ. ಠಾಣಾ ವ್ಯಾಪ್ತಿಯ ತ್ಯಾಗರಾಜನಗರದ ನಿವಾಸಿ ದೀಪಿಕಾ ಜೈನ್ ಅವರು ನೀಡಿದ ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 115(2)ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರ ಮಧ್ಯಾಹ್ನ 1ರ ಸುಮಾರಿಗೆ ತ್ಯಾಗರಾಜನಗರದ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿರುವ ತಮ್ಮ ಅಣ್ಣನ ಮನೆಗೆ ದೀಪಿಕಾ ಜೈನ್ ಅವರು ತಮ್ಮ ಐದು ವರ್ಷದ ಮಗ ನೀವ್ ಜೈನ್ನನ್ನು ಕರೆದುಕೊಂಡು ಬಂದಿದ್ದರು. ಮನೆಯ ಎದುರು ನೀವ್ ಜೈನ್ ಬೇರೆ ಮಕ್ಕಳ ಜತೆಗೆ ಆಟವಾಡುತ್ತಿದ್ದ. ಪಕ್ಕದ ಮನೆಯ ನಿವಾಸಿ, ಆರೋಪಿ ರಂಜನ್ ಏಕಾಏಕಿ ಬಂದು ನೀವ್ ಜೈನ್ಗೆ ಕಾಲಿನಿಂದ ಒದ್ದಿದ್ದ. ಒದ್ದ ರಭಸಕ್ಕೆ ಕೆಳಕ್ಕೆ ಬಿದ್ದ ನೀವ್ ಕಾಲು, ಮುಖಕ್ಕೆ ಗಾಯವಾಗಿ ರಕ್ತಬಂದಿತ್ತು’ ಎಂದು ಪೊಲೀಸರು ಹೇಳಿದರು.

ಆರೋಪಿ ಜಿಮ್ ತರಬೇತುದಾರ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.