ಮರ ಬಿದ್ದು ಮಗು ಸಾವು
ಭಾರಿ ಮಳೆ, ಗಾಳಿ ವೇಳೆ ಮರ ಬಿದ್ದ ಪರಿಣಾಮ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ದೇವರಜೀವನಹಳ್ಳಿಯ ಪೂರ್ವ ಉದ್ಯಾನ ಬಳಿ ಶನಿವಾ ರಾತ್ರಿ ನಡೆದಿದೆ. ತಂದೆ ಸತ್ಯ ಅವರ ಜತೆ ರಕ್ಷಾ(3) ಬೈಕ್‌ನಲ್ಲಿ ಹೋಗುವಾಗ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸತ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಲಕೇಶಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.