ಶನಿವಾರ, ನವೆಂಬರ್ 28, 2020
26 °C
ಅಡೋಬಿ ಡಿಜಿಟಲ್‌ ಬ್ಯುಸಿನೆಸ್‌ ವಿಭಾಗದ ಮುಖ್ಯಸ್ಥ ನಿತಿನ್‌ ಸಿಂಘಾಲ್‌

ಡಿಜಿಟಲ್‌ ಯುಗದತ್ತ ಹೊರಳಿಸಿದ ಕೋವಿಡ್‌: ನಿತಿನ್‌ ಸಿಂಘಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕ ರೋಗ ವಾಣಿಜ್ಯ ವ್ಯವಹಾರದ ಜಗತ್ತನ್ನು ಡಿಜಿಟಲ್‌ ಯುಗದತ್ತ ಹೊರಳಿಸಿದೆ ಎಂದು ಅಡೋಬಿ ಡಿಜಿಟಲ್‌ ಬ್ಯುಸಿನೆಸ್‌ ವಿಭಾಗದ ಮುಖ್ಯಸ್ಥ ನಿತಿನ್‌ ಸಿಂಘಾಲ್‌ ಹೇಳಿದರು.

‘ಬೆಂಗಳೂರು ತಂತ್ರಜ್ಞಾನ ಶೃಂಗ’ದಲ್ಲಿ ಶುಕ್ರವಾರ ‘ಡಿಜಿಟಲ್‌ ಪರಿವರ್ತನೆಯತ್ತ ವ್ಯವಹಾರ’ ಎಂಬ ವಿಷಯ ಕುರಿತು ಮಾತನಾಡಿದ ಅವರು, ‘ಸಾಂಕ್ರಾಮಿಕ ಜಗತ್ತನ್ನು ವ್ಯಾಪಿಸುತ್ತಿದ್ದಂತೆ ಎಲ್ಲ ವಹಿವಾಟುಗಳು ಡಿಜಿಟಲ್‌ ವಿಧಾನದತ್ತ ಹೊರಳಿದವು. ಅತ್ಯಂತ ಕಡಿಮೆ ಅವಧಿಯಲ್ಲೇ ಹೊಸ ಹೊಸ ಡಿಜಿಟಲ್‌ ವಹಿವಾಟು ವಿಧಾನಗಳೂ ಬಳಕೆಗೆ ಬಂದವು. ಮುಂದಿನ ಹಲವು ವರ್ಷಗಳ ಕಾಲ ಡಿಜಿಟಲ್‌ ವಹಿವಾಟು ವಾಣಿಜ್ಯ ವಲಯವನ್ನು ನಿಯಂತ್ರಿಸಲಿದೆ’ ಎಂದರು.

ಡಿಜಿಟಲ್‌ ವಹಿವಾಟಿನಲ್ಲಿ ಸೃಜನಶೀಲತೆಗೆ ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಜಗತ್ತಿನ 1,500 ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರವೂ ಈ ದಿಕ್ಕಿನಲ್ಲಿ ಹೆಜ್ಜೆ ಹಾಕುವುದು ಅಗತ್ಯವಾಗಿದೆ ಎಂದು ಹೇಳಿದರು.

ಭಾರತದಿಂದ ಕಲಿಯುವುದು ಬಹಳಷ್ಟಿದೆ: ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯ ಸರ್ಕಾರದ ವಾಣಿಜ್ಯ ಸಚಿವ ಮಾರ್ಟಿನ್‌ ಪಾಕುಲ, ‘ವ್ಯವಹಾರದ ಡಿಜಿಟಲೀಕರಣದ ವಿಚಾರದಲ್ಲಿ ಜಗತ್ತು ಭಾರತದಿಂದ ಕಲಿಯುವುದು ಬಹಳಷ್ಟಿದೆ. ಈ ದಿಸೆಯಲ್ಲಿ ಭಾರತದಲ್ಲಿ ಅತ್ಯುತ್ತಮವಾದ ಆವಿಷ್ಕಾರಗಳು ನಡೆಯುತ್ತಿವೆ’ ಎಂದರು.

ವಿಕ್ಟೋರಿಯಾ ರಾಜ್ಯವು ಭಾರತದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಲು ಉತ್ಸುಕವಾಗಿದೆ. ಸಂಬಂಧ ವೃದ್ಧಿಗೆ ಬೆಂಗಳೂರು ತಂತ್ರಜ್ಞಾನ ಶೃಂಗ ವೇದಿಕೆಯಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು