ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಾನ್ಸ್‌ಫಾರ್ಮರ್ ಏರಿದ್ದ ಬೆಸ್ಕಾಂ ನೌಕರ ವಿದ್ಯುತ್ ತಗುಲಿ ಸಾವು

Last Updated 23 ಜನವರಿ 2023, 7:41 IST
ಅಕ್ಷರ ಗಾತ್ರ

ಬೆಂಗಳೂರು: ದುರಸ್ತಿ ಕೆಲಸಕ್ಕೆಂದು ಟ್ರಾನ್ಸ್‌ಫಾರ್ಮರ್ ಏರಿದ್ದ ಬೆಸ್ಕಾಂ ನೌಕರ ಗೌತಮದ (25) ಎಂಬುವರು ವಿದ್ಯುತ್ ತಗುಲಿ‌ ಮೃತಪಟ್ಟಿದ್ದಾರೆ.

'ಸುಂಕದಕಟ್ಟರ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು, ಟ್ರಾನ್ಸ್‌ಫಾರ್ಮರ್ ದುರಸ್ತಿಗೆ ಹೋದಾಗ ಈ ಘಟನೆ ನಡೆದಿದೆ' ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

'ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ಭಾನುವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಸಾರ್ವಜನಿಕರು ನೀಡಿದ್ದ ಮಾಹಿತಿಯಂತೆ ಗೌತಮ್ ಹಾಗೂ ಸಿದ್ದರಾಮ್ ಎಂಬುವರು ಸ್ಥಳಕ್ಕೆ ಹೋಗಿದ್ದರು. ಟ್ರಾನ್ಸ್‌ಫಾರ್ಮರ್ ಏರಿದ್ದ ಗೌತಮ್, ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ ಇನ್ನೊಂದು ಟ್ರಾನ್ಸ್‌ಫಾರ್ಮರ್ ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಅದನ್ನು ಗೌತಮ್ ಗಮನಿಸಿರಲಿಲ್ಲ. ಅದೇ ತಂತಿಯಿಂದಾಗಿ ವಿದ್ಯುತ್ ತಗುಲಿ ಗೌತಮ್ ಮೃತಪಟ್ಟಿದ್ದಾರೆ' ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT