ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹236 ಕೋಟಿಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿ: ಬಿಬಿಎಂಪಿ, ಜಲಮಂಡಳಿಗೆ ನೋಟಿಸ್‌

₹236 ಕೋಟಿಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿ
Last Updated 18 ನವೆಂಬರ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು:ಬೆಸ್ಕಾಂನಇಂದಿರಾ ನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರ ಮತ್ತು ವೈಟ್‌ಫೀಲ್ಡ್‌ ವಿಭಾಗಗಳಲ್ಲಿನ ಜಲಮಂಡಳಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗಗಳು ₹236 ಕೋಟಿಗೂ ಅಧಿಕ ವಿದ್ಯುತ್‌ ಶುಲ್ಕ ಬಾಕಿ ಉಳಿಸಿಕೊಂಡಿವೆ. ಈ ಐದು ವಿಭಾಗಗಳು ಜಲಮಂಡಳಿ ಮತ್ತು ಬಿಬಿಎಂಪಿಗೆ ಬಿಲ್‌ ಪಾವತಿಸುವಂತೆ ಕೋರಿ ಪ್ರತ್ಯೇಕ ನೋಟಿಸ್‌ ಜಾರಿಗೊಳಿಸಿವೆ.

ವಿದ್ಯುತ್‌ ಬಿಲ್‌ ವಸೂಲಿಗೆ ಕ್ರಮ ಕೈಗೊಳ್ಳಲು ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದರು.

ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡನ್‌, ಬಂಬೂ ಬಜಾರ್‌, ಕಾಕ್ಸ್‌ ಟೌನ್‌, ಬಾಣಸವಾಡಿ ಮತ್ತು ನಾಗವಾರ ಉಪವಿಭಾಗಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ ₹27.54 ಕೋಟಿ ಮತ್ತು 90.20 ಕೋಟಿ ಬಾಕಿ ಉಳಿಸಿಕೊಂಡಿವೆ.

ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್‌ ಟೌನ್‌, ಕೋರಮಂಗಲ, ಮುರುಗೇಶ್‌ ಪಾಳ್ಯ, ಮಡಿವಾಳ, ಎಚ್.ಎ.ಎಲ್‌ ಉಪ ವಿಭಾಗಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್‌ಗಳಿಂದ ಜಲಮಂಡಳಿ ₹23.71 ಕೋಟಿ ವಿದ್ಯುತ್‌ ಶುಲ್ಕ ಬಾಕಿ ಇರಿಸಿಕೊಂಡಿದ್ದು, 19 ವಾರ್ಡ್‌ಗಳಿಂದ ಬಿಬಿಎಂಪಿ ಸುಮಾರು ₹22.20 ಕೋಟಿ ವಿದ್ಯುತ್‌ ಶುಲ್ಕ ಪಾವತಿಸಬೇಕಾಗಿದೆ.

ಮಲ್ಲೇಶ್ವರ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಜಲಮಂಡಳಿ ಮತ್ತು ಬಿಬಿಎಂಪಿ ಕ್ರಮವಾಗಿ ₹13.60 ಕೋಟಿ ಮತ್ತು ₹16.70 ಕೋಟಿಗಳನ್ನು ಬೆಸ್ಕಾಂಗೆ ಪಾವತಿಸಬೇಕಾಗಿದೆ. ಮಲ್ಲೇಶ್ವರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಎರಡೂ ಸಂಸ್ಥೆಗಳಿಗೆ ಬಿಲ್‌ ಪಾವತಿಸಲು ಕೋರಿ ನೋಟಿಸ್‌ ಜಾರಿಗೊಳಿಸಿದ್ದಾರೆ.

ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಜಲಮಂಡಳಿ, ಕಬ್ಬನ್‌ ಪಾರ್ಕ್‌, ತೋಟಗಾರಿಕೆ ಇಲಾಖೆ, ಅಂಚೆ ಕಚೇರಿ, ನ್ಯಾಷನಲ್‌ ಏರೋನಾಟಿಕ್ಸ್‌ ಲಿಮಿಟೆಡ್‌, ಎಲ್‌ಐಸಿ, ಬಿಎಸ್‌ಎನ್ಎಲ್‌, ಬಿಡಿಎ, ಬಿಎಂಆರ್‌ಸಿಎಲ್‌, ಡಿಆರ್‌ಡಿಒ, ಹೈಕೋರ್ಟ್‌ ವಸತಿಗೃಹ ಮುಂತಾದ ಸರ್ಕಾರಿ ಕಚೇರಿಗಳು ಒಟ್ಟು ₹36.25 ಕೋಟಿ ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಎಂಜಿನಿಯರ್‌ ನೀಡಿರುವ ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಹಾಗೆಯೇ, ವೈಟ್‌ ಫೀಲ್ಡ್‌ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್‌ಗಳಿಂದ ಬೆಸ್ಕಾಂಗೆ ಜಲಮಂಡಳಿ ಮತ್ತು ಬಿಬಿಎಂಪಿಯಿಂದ ಒಟ್ಟು ₹5.81 ಕೋಟಿ ವಿದ್ಯುತ್‌ ಶುಲ್ಕ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT