ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ ಕ್ಲಬ್‌ನ 6ನೇ ಆವೃತ್ತಿ ಕಾರ್ಯಕ್ರಮ

Published 29 ಜೂನ್ 2023, 14:11 IST
Last Updated 29 ಜೂನ್ 2023, 14:11 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ ವೇದಿಕೆಯು ಜುಲೈ 1ರಂದು ಆರನೇ ಆವೃತ್ತಿಯ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ಮಧ್ಯಾಹ್ನ 2.30ಕ್ಕೆ, ಪಿ.ಸಿ.ಚಂದ್ರ ಜ್ಯುವೆಲರ್ಸ್‌ ಸಹಯೋಗದಲ್ಲಿ ನಗರದ ಕೋರಮಂಗಲದ 6ನೇ ಬ್ಲಾಕ್‌ನ 6ನೇ ಅಡ್ಡರಸ್ತೆಯಲ್ಲಿರುವ ಕೋರಮಂಗಲ ಕ್ಲಬ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹಟ್ಟಿ ಕಾಫಿ ಹಾಗೂ ಐಎಫ್‌ಎಂ (ಫ್ಯಾಷನ್‌ ಶೋ ಪಾರ್ಟನರ್‌) ಪ್ರಾಯೋಜಕತ್ವ ವಹಿಸಿದೆ.

ಗಾಯಕಿ ಚೈತ್ರಾ ಜೆ. ಆಚಾರ್‌ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿನ್ಯಾಸಕಿ ಶೈನಿ ಅಲೆಕ್ಸಾಂಡರ್ ಅವರು ಆಭರಣ ವಿನ್ಯಾಸ ಕುರಿತು ಮಾತನಾಡಲಿದ್ದಾರೆ. ಜೆ.ಎನ್‌.ರವಿ ಅವರ ನಿರ್ದೇಶನ ಹಾಗೂ ಸಿರಿ ರಮೇಶ್ ಅವರ ನೃತ್ಯ ಸಂಯೋಜನೆಯಲ್ಲಿ ಐಎಫ್‌ಎಂ ಸಿನಿಮಾ ಸಂಸ್ಥೆಯ ಜ್ಯುವೆಲರ್ಸ್‌ ಫ್ಯಾಷನ್‌ ಶೋ ಮೂಡಿಬರಲಿದೆ. ತಾರಕ್‌ ನೃತ್ಯ ಅಕಾಡೆಮಿಯಿಂದ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರನ್ನು ರಂಜಿಸಲಿದೆ.

ಕಾರ್ಯಕ್ರಮದಲ್ಲಿ ಅಚ್ಚರಿ ಉಡುಗೊರೆ ಗೆಲ್ಲುವ ಅವಕಾಶವೂ ಇರಲಿದೆ. ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಗೆ bit.ly/bhumikaclubjuly1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT