ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾರು– ಬೈಕ್ ಡಿಕ್ಕಿ: ಸವಾರ ಸಾವು

Published 21 ಡಿಸೆಂಬರ್ 2023, 16:18 IST
Last Updated 21 ಡಿಸೆಂಬರ್ 2023, 16:18 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ಅಶೋಕ ಸ್ತಂಭದ ಬಳಿ ಕಾರು ಹಾಗೂ ಬಿಎಂಡಬ್ಲ್ಯು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಸವಾರ ಶೇಖ್ ನೌಶೀರ್ ಅಹಮ್ಮದ್ (34) ಮೃತಪಟ್ಟಿದ್ದಾರೆ.

‘ಡೇರಿ ವೃತ್ತದ ನಿವಾಸಿ ಶೇಖ್ ನೌಶೀರ್ ಅಹಮ್ಮದ್, ಹಳೇ ಬೈಕ್‌ ಮಾರಾಟದ ಡೀಲರ್ ಆಗಿದ್ದರು. ಬಿಎಂಡಬ್ಲ್ಯು ಬೈಕ್ ಖರೀದಿಸಲು ಮುಂದಾಗಿದ್ದ ಅವರು, ಅತೀ ವೇಗದಲ್ಲಿ ಟೆಸ್ಟ್ ಡ್ರೈವ್ ಮಾಡುವ ವೇಳೆ ಈ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ಸ್ಥಳೀಯ ನಿವಾಸಿ ಮುದಾಸೀರ್, ತಮ್ಮ ಬಿಎಂಡಬ್ಲ್ಯು ಬೈಕ್ ಮಾರಾಟಕ್ಕೆ ಇರಿಸಿದ್ದರು. ಬೈಕ್ ಪರಿಶೀಲಿಸಲೆಂದು ನೌಶೀರ್ ಬುಧವಾರ ರಾತ್ರಿ ಮುದಾಸೀರ್ ಬಳಿ ಬಂದಿದ್ದರು. ಬೈಕ್ ಚಲಾಯಿಸಿಕೊಂಡು ಮಾಧವನ್ ಪಾರ್ಕ್ ಕಡೆಯಿಂದ ಅಶೋಕ ಸ್ತಂಭದ ಕಡೆಗೆ ಹೊರಟಿದ್ದರು. ಅತೀ ವೇಗದಲ್ಲಿ ಬೈಕ್ ಚಲಾಯಿಸಿದ್ದರು. ಹಿಂಬದಿಯಲ್ಲಿ ಮುದಾಸೀರ್ ಕುಳಿತಿದ್ದರು.’

‘ಕನಕಪಾಳ್ಯ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಬೈಕ್‌ ನಡುವೆ ಡಿಕ್ಕಿಯಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ನೌಶೀರ್ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮುದಾಸೀರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿರ್ಲಕ್ಷ್ಯದ ಚಾಲನೆ ಆರೋಪದಡಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT