ಗುರುವಾರ , ಫೆಬ್ರವರಿ 9, 2023
30 °C

ಬಿಲ್‌ ಪಾವತಿಸಲು ಸಮಸ್ಯೆ: ತಾಂತ್ರಿಕ ದೋಷ ಸರಿಪಡಿಸಿದ ಬೆಸ್ಕಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಲ್‌ ಪಾವತಿಸುವಲ್ಲಿ ತಲೆದೋರಿದ್ದ ತಾಂತ್ರಿಕ ಸಮಸ್ಯೆಯನ್ನು ಬೆಸ್ಕಾಂ ಸರಿಪಡಿಸಿದೆ.

ಇತ್ತೀಚೆಗೆ ಆನ್‌ಲೈನ್‌ ಮೂಲಕ ಬಿಲ್‌ ಪಾವತಿಸಲು ಮುಂದಾದ ಗ್ರಾಹಕರಿಗೆ ಆಘಾತ ಕಾದಿತ್ತು. ವಾಸ್ತವಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚು ಬಿಲ್‌ ತೋರಿಸುತ್ತಿತ್ತು. ಈ ಬಗ್ಗೆ ಹಲವು ಗ್ರಾಹಕರು ಬೆಸ್ಕಾಂಗೆ ದೂರು ನೀಡಿದ್ದರು.

‘ನಮ್ಮ ಗಮನಕ್ಕೆ ಬಂದ ತಕ್ಷಣ ತಾಂತ್ರಿಕ ತಂಡವು ಸಮಸ್ಯೆಯನ್ನು ಬಗೆಹರಿಸಿದೆ. ರಾಜ್ಯದಲ್ಲಿನ ಎಲ್ಲ ಎಸ್ಕಾಂಗಳ ವ್ಯಾಪ್ತಿಯ ಹಲವೆಡೆ ಈ ರೀತಿ ಸಮಸ್ಯೆಗಳು ವರದಿಯಾಗಿದ್ದವು’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಸಹಾಯವಾಣಿಗೆ 1912 ಸಂಪರ್ಕಿಸುವಂತೆ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು