ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಬಯೊಮೆಟ್ರಿಕ್ ಕಾರ್ಡ್ ವಿತರಣೆ

Last Updated 30 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ತಿಲಕ್‌ನಗರ ಬಡಾವಣೆಯ ಕೊಳೆಗೇರಿಯ 65 ನಿವಾಸಿಗಳಿಗೆ ಬಿಬಿಎಂಪಿ ವತಿಯಿಂದ ಬಯೊಮೆಟ್ರಿಕ್ ಕಾರ್ಡ್ ವಿತರಿಸಲಾಯಿತು.

ತಿಲಕ್‍ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಡ್‌ ವಿತರಿಸಿದ ಶಾಸಕ ರಾಮಲಿಂಗಾರೆಡ್ಡಿ, ‘ಕೊಳೆಗೇರಿ ನಿವಾಸಿಗಳಿಗೆ ಜಾಗದ ಹಕ್ಕುಪತ್ರ ವಿತರಣೆ ಮಾಡುವ ಬದಲು, ಇದೇ ಮೊದಲ ಬಾರಿಗೆ ಬಯೊಮೆಟ್ರಿಕ್ ಕಾರ್ಡ್ ವಿತರಿಸಿದ್ದೇವೆ. ಸರ್ಕಾರದ ಸೌಲಭ್ಯಗಳನ್ನು ಯಾವುದೇ ಅಡೆತಡೆ ಇಲ್ಲದೆ ಪಡೆಯಲು ಈ ಕಾರ್ಡ್‌ ನೆರವಾಗಲಿದೆ’ ಎಂದರು.

‘ಯಾವುದೇ ಕಾರಣಕ್ಕೂ ಈ ಕಾರ್ಡ್ ದುರುಪಯೋಗಪಡಿಸಿಕೊಳ್ಳಬೇಡಿ’ ಎಂದು ಅವರು ಕಿವಿಮಾತು ಹೇಳಿದರು.

‘ಜಯನಗರದ ಎಂ.ಎಸ್.ಬಿಲ್ಡಿಂಗ್ ಕಾಲೊನಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ 2 ಕೊಠಡಿಗಳ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಇದಕ್ಕೆ ಕಾಲಾವಕಾಶಬೇಕು’ ಎಂದರು.

ಶಾಸಕಿ ಸೌಮ್ಯಾ ರೆಡ್ಡಿ, ‘ಜಯನಗರ ಕ್ಷೇತ್ರವನ್ನು ಕೊಳಚೆಮುಕ್ತ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಜನ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು’ ಎಂದು ಕೋರಿದರು.

ಕೊಳೆಗೇರಿ ನಿವಾಸಿಗಳು ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT