ಶನಿವಾರ, ಜನವರಿ 28, 2023
14 °C

ಪಕ್ಷಿಗಳ ಸೀಟಿ: ಅಪಾರ್ಥದಿಂದ ಮಾಲೀಕನಿಗೆ ಥಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೆಂಡತಿಗೆ ಶಿಳ್ಳೆ ಹಾಕಿ ಚುಡಾಯಿಸುತ್ತಿದ್ದಾನೆ’ ಎಂಬ ತಪ್ಪು ಗ್ರಹಿಕೆಯಿಂದ ಪಕ್ಕದ ಕಟ್ಟಡದ ನಿವಾಸಿಗಳು ಬ್ಯಾಂಕ್‌ ಉದ್ಯೋಗಿ ಶೋಬಿನ್‌ ಬಾನು ಎಂಬುವವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದು, ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೇರಘಟ್ಟ ರಸ್ತೆಯ ರುಕ್ಮಯ್ಯ ಲೇಔಟ್‌ನ ನಿವಾಸಿ ಶೋಬಿನ್‌ ಅವರು ಮನುಷ್ಯ ರಂತೆಯೇ ಶಿಳ್ಳೆ ಹಾಕುವ ಕಾಕ್‌ಟೇಲ್‌ ಪಕ್ಷಿ ಗಳನ್ನು ಸಾಕಿದ್ದರು. ಅವುಗಳು ಮನುಷ್ಯರ ಹಾಗೆಯೆ ಸೀಟಿ ಹೊಡೆಯುತ್ತವೆ. ಬಾನು ಅವರೇ ಪತ್ನಿಯನ್ನು ನೋಡಿ ಸೀಟಿ ಹೊಡೆಯುತ್ತಿದ್ದಾರೆ ಎಂದು ಭಾವಿಸಿ ಪಕ್ಕದ ನಿವಾಸಿಗಳು ಹಲ್ಲೆ ನಡೆಸಿದ್ದಾರೆ. ಮಚ್ಚಿನ ಹಿಡಿ ಯಿಂದ ಥಳಿಸಿದ್ದು ತಲೆಗೆ ಗಾಯವಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ಆಧರಿಸಿ ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ ಪಕ್ಷಿಗಳು ಸೀಟಿ ಹೊಡೆಯುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು