ತನಿಖೆಯ ಭಾಗವಾಗಿ ಎಸ್‌ಐಟಿ ತನಿಖಾಧಿಕಾರಿಗಳು ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಹಣಕಾಸಿನ ವಹಿವಾಟು ಕುರಿತು ವಿಚಾರಿಸುತ್ತಾರೆ.
ಜಿ.ಪರಮೇಶ್ವರ ಗೃಹ ಸಚಿವ
‘ಡಿಕೆಶಿ ಜತೆ ಚರ್ಚಿಸಿಲ್ಲ‘
‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ನಾಯಕರು. ನಿತ್ಯ ಅವರ ಮನೆಗೆ ಭೇಟಿ ನೀಡಿ ರಾಜಕೀಯ ವಿಚಾರ ಚರ್ಚೆ ಮಾಡುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎಸ್‌ಐಟಿ ನೋಟಿಸ್ ನೀಡಿರುವ ವಿಚಾರವನ್ನು ಅವರ ಜತೆ ಚರ್ಚಿಸಿಲ್ಲ’ ಎಂದು ಮೊಹಮ್ಮದ್ ನಲಪಾಡ್ ಹೇಳಿದರು.