ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭಿಯಾನ ಯಶಸ್ವಿ, 4ರಂದು ಸಮಾರೋಪ: ಡಾ.ಸಿ.ಎನ್.ಅಶ್ವತ್ಥನಾರಾಯಣ

Last Updated 1 ಜುಲೈ 2020, 9:02 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಬಗ್ಗೆ ಜನ ಜಾಗೃತಿ ಮೂಡಿಸಬೇಕೆಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾರವರ ಕರೆಯ ಮೇರೆಗೆ ರಾಜ್ಯದಲ್ಲಿ 23 ದಿನಗಳ ಕಾಲ ಮನೆ- ಮನೆ ಸಂಪರ್ಕ ಹಾಗೂ ವೀಡಿಯೋ ಕಾನ್ಫರೆನ್ಸ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ರು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19ರ ಬಗ್ಗೆ ಜಾಗೃತಿ ಅಭಿಯಾನದ ವಿವರ ನೀಡಿದರು. ಇದೇ 4ರಂದು ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19ರ ಬಗ್ಗೆ ಜಾಗೃತಿ ಅಭಿಯಾನದ ಸಂದರ್ಭದಲ್ಲಿ ರಾಜ್ಯದಲ್ಲಿ ಒಟ್ಟು 427 ರ‍್ಯಾಲಿಗಳು ನಡೆದಿದ್ದು, 10,51,526 ಜನರು ಭಾಗವಹಿಸಿದ್ದಾರೆ. ಈ ಅಭಿಯಾನದಲ್ಲಿ ಭಾಷಣಕಾರರಾಗಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾದ ಜೆ.ಪಿ. ನಡ್ಡಾರವರು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು, ರಾಜ್ಯ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ರವರು ಮತ್ತು ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಹಾಗೂ ಪ್ರಲ್ಹಾದ ಜೋಶಿಯವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು.
ಉಳಿದಂತೆ ಜಿಲ್ಲಾ ವೀಡಿಯೋ ಕಾನ್ಫರೆನ್ಸ್‌ಗಳಲ್ಲಿ ರಾಜ್ಯದ ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ಪ್ರಲ್ಹಾದ ಜೋಶಿ, ರಾಜ್ಯದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ|| ಅಶ್ವಥ್‍ನಾರಾಯಣ, ಲಕ್ಷ್ಮಣ ಸಂ. ಸವದಿ, ರಾಜ್ಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಸಿ.ಟಿ. ರವಿ, ಶ್ರೀಮತಿ ಶಶಿಕಲಾ ಜೊಲ್ಲೆ, ಆರ್. ಅಶೋಕ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್, ರಾಜ್ಯದ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದರಾದ ಶೋಭಾ ಕರಂದ್ಲಾಜೆ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‍ಕುಮಾರ್ ಸುರಾಣಾ, ಎಂ.ಬಿ. ಭಾನುಪ್ರಕಾಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಸದಸ್ಯರಾದ ಶಿವಕುಮಾರ್ ಉದಾಸಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಅಶೋಕ್ ಗಸ್ತಿ, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಎಸ್. ವಿಶ್ವನಾಥ್ ಭಟ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ ಭಾರತಿ ಶೆಟ್ಟಿ, ಚಲನಚಿತ್ರ ನಟಿಯರಾದ ತಾರಾ ಅನುರಾಧಾ, ಶೃತಿ ಭಾಗವಹಿಸಿದ್ದರು. ಜಿಲ್ಲಾ ಮತ್ತು ಮಂಡಲಗಳ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್‍ನ ಸಂಕಷ್ಟದ ಬಗ್ಗೆ ನಾವು ಸಮಾಜದಲ್ಲಿ ಜಾಗೃತಿ ನಿರ್ಮಿಸಬೇಕೆಂದು ಮಾರ್ಗದರ್ಶನ ಮಾಡಿದರು.

ವಿಡಿಯೋ ಮತ್ತು ಆಡಿಯೋ ಕಾನ್ಫರೆನ್ಸ್‌ಗಳುಇವುಗಳೆಲ್ಲದರ ಜೊತೆಗೆ ಕೇಂದ್ರ ಸರಕಾರದ ನೇರ ಫಲಾನುಭವಿಗಳಾದ ರೈತರು, ಕಾರ್ಮಿಕರು ಹಾಗೂ ಮಹಿಳಾ ಫಲಾನುಭವಿಗಳ ವಿಡಿಯೋ ಕಾನ್ಫಿರೆನ್ಸ್‌ಗಳನ್ನು ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾನ್ಫಿರೆನ್ಸ್‌ಗಳಲ್ಲಿ ರಾಜ್ಯದ ವಿವಿಧೆಡೆಯಿಂದ 28,421 ಫಲಾನುಭವಿಗಳು ಭಾಗಿಯಾಗಿದ್ದರು. ಇದರ ಜೊತೆಗೆ ಆಟೋಚಾಲಕರು, ಟ್ಯಾಕ್ಸಿಚಾಲಕರು ಹಾಗೂ ಸಣ್ಣ ಕೈಗಾರಿಕೆಗಳ ಮಾಲೀಕರ ವಿಡಿಯೋ ಕಾನ್ಫರೆನ್ಸ್‌ಗಳನ್ನೂ ಹಮ್ಮಿಕೊಳ್ಳಲಾಗಿತ್ತು.

ಮನೆ-ಮನೆ ಸಂಪರ್ಕ ಅಭಿಯಾನ

ರಾಜ್ಯದಲ್ಲಿ ಜೂನ್ 07 ರಿಂದ 30ರವರೆಗೆ ನಡೆದ ಜನ ಸಂಪರ್ಕ ಅಭಿಯಾನದಲ್ಲಿ 42,83,069 ಮನೆಗಳನ್ನು ಸಂಪರ್ಕಿಸಲಾಗಿದೆ. 1 ಕೋಟಿ 29 ಲಕ್ಷ ಜನರನ್ನು ಮನೆಗಳಲ್ಲಿ ಭೇಟಿ ಮಾಡಿ ಕರಪತ್ರ ನೀಡಿ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಅದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸುಮಾರು 11 ಲಕ್ಷ ಜನರನ್ನು ತಲುಪಲಾಗಿದೆ. ಒಟ್ಟು 1 ಕೋಟಿ 40 ಲಕ್ಷ ಜನರನ್ನು ಜನ ಸಂಪರ್ಕ ಅಭಿಯಾನದಲ್ಲಿ ತಲುಪಲಾಗಿದೆ. 5,13,035 ಜನ ಕಾರ್ಯಕರ್ತರು 23 ದಿನಗಳ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಧಾನ ಮಂತ್ರಿಗಳು ನೀಡಿದ ಭಾರತ ಆತ್ಮನಿರ್ಭರವಾಗಬೇಕೆಂಬ ಕರೆಯನ್ನು ನಿಜಗೊಳಿಸಲು ರಾಜ್ಯಾದ್ಯಂತ ನಡೆದ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಕುರಿತ ಜಾಗೃತಿ ಅಭಿಯಾನದಲ್ಲಿ ಪ್ರಧಾನ ಮಂತ್ರಿ ಮೋದಿಜಿಯವರು ನೀಡಿದ ಕರೆಯಂತೆ ಭಾರತ ಸ್ವಾವಲಂಬಿಯಾಗಬೇಕಾದರೆ ನಾವೆಲ್ಲರೂ ಸ್ವದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಈ ಮೂಲಕ ಹೆಚ್ಚೆಚ್ಚು ಸ್ಥಾನೀಯ ಜನರಿಗೆ ಉದ್ಯೋಗ ಲಭಿಸುವಂತೆ ಆಗಬೇಕು. ಲೋಕಲ್ (ಸ್ಥಳಿಯ) ವಸ್ತುಗಳನ್ನು ಬ್ರಾಂಡಿಂಗ್ ಮಾಡಬೇಕು ಎಂದು ಅಭಿಯಾನದ ಸಂದರ್ಭದಲ್ಲಿ 37 ಲಕ್ಷಕ್ಕಿಂತ ಹೆಚ್ಚು ಮನೆಗಳಲ್ಲಿ ಸಂಕಲ್ಪ ಮಾಡಿಸಲಾಗಿದೆ.

ಸ್ಯಾನಿಟೈಸರ್ / ಮುಖಗವಸು

ರಾಜ್ಯದಲ್ಲಿ 23 ದಿನಗಳ ಅಭಿಯಾನದಲ್ಲಿ 4,33,165 ಸ್ಯಾನಿಟೈಸರ್‌ಗಳನ್ನು ಹಂಚಲಾಗಿದ್ದರೆ, 7,22,950 ಮುಖಗವಸುಗಳನ್ನು ವಿತರಿಸಲಾಗಿದೆ.

ರಾಜ್ಯದಲ್ಲಿ ನಡೆದ ಜನ ಸಂಪರ್ಕ ಅಭಿಯಾನದ ಸಮಾರೋಪ ಕಾರ್ಯಕ್ರಮ ಜುಲೈ 4ಕ್ಕೆ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಕೋವಿಡ್-19ರ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಮನೆ ಸಂಪರ್ಕ, ಕರಪತ್ರ ವಿತರಣೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ, ಸ್ವದೇಶಿ ವಸ್ತುಗಳನ್ನು ಉಪಯೋಗಿಸುವ ಸಂಕಲ್ಪ ಸೇರಿದಂತೆ ಎಲ್ಲ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ಇದೇ ಜುಲೈ 4ರಂದು ಸಂಜೆ 5:00 ಗಂಟೆಗೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ 50 ಲಕ್ಷ ಜನರು ಭಾಗವಹಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ವಚ್ರ್ಯುವಲ್ ರ್ಯಾಲಿಯಲ್ಲಿ ಮುಖ್ಯ ಭಾಷಣಕಾರರಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಬಿ.ಎಲ್. ಸಂತೋಷ್‍ರವರು, ಮುಖ್ಯ ಅಥಿತಿಗಳಾಗಿ ರಾಜ್ಯದ ಉಪಮುಖ್ಯ ಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳರವರು, ದಿಕ್ಸೂಚಿ ಭಾಷಣವನ್ನು ನಮ್ಮ ರಾಜ್ಯದ ಪ್ರಭಾರಿಗಳು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ. ಮುರಳಿಧರ್‍ರಾವ್ ರವರು, ಅಧ್ಯಕ್ಷತೆಯನ್ನು ನಮ್ಮ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್‍ಕಟೀಲ್‍ರವರು ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪೇಸ್‍ಬುಕ್, ಟ್ವೀಟರ್, ಎಸ್.ಎಂ.ಎಸ್, ಅಡಿಯೋ ಕರೆ, ಯೂಟ್ಯೂಬ್ ಇತ್ಯಾದಿಗಳ ಮೂಲಕ ಆನ್‍ಲೈನ್ ರ್ಯಾಲಿಯನ್ನು ನಡೆಸಲಾಗುತ್ತದೆ.

ಕರೋನಾ ನಿಯಂತ್ರಿಸಲು ನಿಯಮಗಳ ಪಾಲನೆಗೆ ಆಗ್ರಹ

ವ್ಯಕ್ತಿಗತ ಮತ್ತು ಸಾಮಾಜಿಕ ವ್ಯವಹಾರದಲ್ಲಿ ಬೇಜವಾಬ್ದಾರಿ ಹೆಚ್ಚಾಗಿದೆ. ಇದರಿಂದ ವಿಪರೀತವಾಗಿ ಕರೋನಾ ಹೆಚ್ಚಾಗುತ್ತಿದೆ. ಕರೋನಾ ತಡೆಯಲು, ನಿಯಂತ್ರಿಸಲು ನಿಮಯಗಳನ್ನು ರೂಪಿಸಲಾಗಿತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿದ್ದೇವೆ. ಈ ಕುರಿತು ಪ್ರಧಾನ ಮಂತ್ರಿಯಾದ ನಾನು ಸೇರಿದಂತೆ ನಿಯಮಗಳನ್ನು ಉಲ್ಲಂಘಿಸುವುದು ಸರಿಯಲ್ಲ. ಯಾರ್ಯಾರು ನಿಯಮಗಳನ್ನು ಪಾಲಿಸುವುದಿಲ್ಲವೋ ಅವರಿಗೆ ಪ್ರಭಾವಿಯಾಗಿ ನಿಯಮ ಪಾಲನೆ ಮಾಡುವಂತೆ ಹೇಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಉದಾಸೀನತೆಯಿಂದಲೇ ಕರೋನಾ ಹೆಚ್ಚಾಗುತ್ತಿದೆ. ಆದ್ದರಿಂದ ಜವಾಬ್ದಾರಿಯಿಂದ, ಹೊಣೆಗಾರಿಕೆಯಿಂದ ಸಮಾಜದಲ್ಲಿ ಸಾಮೂಹಿಕವಾಗಿ ಔಷಧಿ ಇಲ್ಲದ ಮಹಾಮಾರಿ ವಿರುದ್ಧ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಕರೋನಾವನ್ನು ಸೋಲಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT