ಶನಿವಾರ, ಡಿಸೆಂಬರ್ 14, 2019
24 °C

ಅವಹೇಳನಕಾರಿ ಪೋಸ್ಟ್: 'ಜೋಕರ್ಸ್‌ ಆಫ್‌ ಬಿಜೆಪಿ' ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಿರುವ ‘ಜೋಕರ್ಸ್‌ ಆಫ್‌ ಬಿಜೆಪಿ’ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

‘ಅನರ್ಹಗೊಂಡ ಶ್ವಾನಕ್ಕೂ ಕಮಲ ಪಕ್ಷದಲ್ಲಿ ಉತ್ತಮ ಸ್ಥಾನವಿದೆ ಎಂದು ನಾಯಿ ಚಿತ್ರಕ್ಕೆ ಆಭರಣ ತೊಡಿಸಿ, ಅದಕ್ಕೆ ಅನರ್ಹ ಶಾಸಕ ಎಂದು ಶೀರ್ಷಿಕೆ ನೀಡಲಾಗಿದೆ. ಅಲ್ಲದೆ, ಆ ಚಿತ್ರವನ್ನು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕಡು ಬಡ ಮಗುವಿಗೆ ಹೋಲಿಸಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಮತ್ತು ಕಾನೂನು ಬಾಹಿರ’ ಎಂದು ದೂರಿನಲ್ಲಿ ತಿಳಿಸಿದೆ.

ಕೂಡಲೇ ‘ಜೋರ್ಕಸ್‌ ಆಫ್‌ ಬಿಜೆಪಿ’ ಫೇಸ್‌ಬುಕ್‌ ಪೇಜ್‌ ಸ್ಥಗಿತಗೊಳಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು