ಬೆಂಗಳೂರು: ‘ಚಿತ್ರಕಲಾವಿದ ಬಿ.ಕೆ.ಎಸ್. ವರ್ಮಾ ಅವರ ಹೆಸರಿನಲ್ಲಿ ಕಲಾ ಗ್ಯಾಲರಿ ಅಥವಾ ಕಲಾಮಂದಿರ ನಿರ್ಮಾಣ ಮಾಡುವ ಅಗತ್ಯವಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಕೆಲಸವೂ ಅಗತ್ಯ’ ಎಂದು ಕಲಾವಿದ ಚಿ.ಸು. ಕೃಷ್ಣಸೆಟ್ಟಿ ಹೇಳಿದರು.

ಕಲಾಮಂದಿರ ಕಲಾಶಾಲೆ ಆಯೋಜಿಸಿದ್ದ ‘ಬಿ.ಕೆ.ಎಸ್.ವರ್ಮಾ ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವರ್ಮಾ ಎಂದರೆ ವಿಶಿಷ್ಟ ವ್ಯಕ್ತಿತ್ವ. ಯಾರ ಕೃಪಾಶೀರ್ವಾದವೂ ಇಲ್ಲದೆ ಬೆಳೆದ ಕಲಾವಿದ. ಅವರು ಅಗಲಿದ ನಂತರವೂ ಕಲೆಯ ಮೂಲಕ ತಮ್ಮನ್ನು ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದ್ದಾರೆ’ ಎಂದರು.

‘ವರ್ಮಾ ಅವರ ಭುವನೇಶ್ವರಿ ಚಿತ್ರ ಈಗ ಎಲ್ಲ ಕನ್ನಡ ಕಾರ್ಯಕ್ರಮಗಳಲ್ಲೂ ಕಾಣಿಸುತ್ತದೆ. ಅದನ್ನು ಸರ್ಕಾರ ಅಧಿಕೃತಗೊಳಿಸಿದ್ದಿದ್ದರೆ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿತ್ತು. ಅವರು ನಿಧನರಾದಾಗ ಸರ್ಕಾರಿ ಗೌರವಗಳು ಸಲ್ಲಬೇಕಿತ್ತು. ಅವುಗಳನ್ನು ಕೊಡಿಸುವ ವಿಷಯದಲ್ಲಿ ನಾವೆಲ್ಲರೂ ಸೋತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾವಿದ ಚಂದ್ರನಾಥ ಆಚಾರ್ಯ ಮಾತನಾಡಿ, ‘ಬಿ.ಕೆ.ಎಸ್.ವರ್ಮಾ ಅವರು ಕಲಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಮರೆಯುವಂತಿಲ್ಲ. ಅವರ ಹಾದಿಯಲ್ಲಿ ಮುನ್ನಡೆಯುವ ಕೆಲಸವನ್ನು ಯುವ ಕಲಾವಿದರು ಮಾಡಲಿ’ ಎಂದು ಆಶಿಸಿದರು.

‘ಬಿ.ಕೆ.ಎಸ್.ವರ್ಮಾ ಅವರ ಕಲಾಕೃತಿಗಳನ್ನು ಸಂಗ್ರಹಿಸಿಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಚಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.