ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿರು ಕಟ್ಟಡ ರೇಟಿಂಗ್‌ಗಾಗಿ ಬಿಎಂಆರ್‌ಸಿಎಲ್‌–ಗೃಹ ಕೌನ್ಸಿಲ್ ಒಪ್ಪಂದ

Published : 30 ಆಗಸ್ಟ್ 2024, 16:27 IST
Last Updated : 30 ಆಗಸ್ಟ್ 2024, 16:27 IST
ಫಾಲೋ ಮಾಡಿ
Comments

ಬೆಂಗಳೂರು: ಹಸಿರು ಕಟ್ಟಡ ಮತ್ತು ಸುಸ್ಥಿರ ವಾಸಸ್ಥಾನಗಳನ್ನು ಉತ್ತೇಜಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮತ್ತು ಗ್ರೀನ್‌ ರೇಟಿಂಗ್‌ ಫಾರ್‌ ಇಂಟಿಗ್ರೇಟೆಡ್‌ ಹ್ಯಾಬಿಟಾಟ್‌ ಅಸೆಸ್ಮೆಂಟ್‌ (ಗೃಹ) ಕೌನ್ಸಿಲ್‌ ಶುಕ್ರವಾರ ಒಪ್ಪಂದ ಮಾಡಿಕೊಂಡಿವೆ.

ನಮ್ಮ ಮೆಟ್ರೊ ಕಾರಿಡಾರ್‌ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸಮಯದಲ್ಲಿ ಹಸಿರು ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡುವುದು, ಮೆಟ್ರೊ ನಿಲ್ದಾಣಗಳ ಹಸಿರು ಕಟ್ಟಡ ಪ್ರಮಾಣಪತ್ರ ಪಡೆಯುವುದು, ಅದಕ್ಕೆ ಸಂಬಂಧಪಟ್ಟಂತೆ ತರಬೇತಿ ಮತ್ತು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು. ಹಸಿರು ಕಟ್ಟಡ ಕ್ಷೇತ್ರದಲ್ಲಿ ಸಾಮರ್ಥ್ಯ ವೃದ್ಧಿ, ಗೃಹ ರೇಟಿಂಗ್‌ಗಾಗಿ ಯೋಜನೆಗಳ ನೋಂದಣಿ, ಮಾಹಿತಿ ಹಂಚಿಕೊಳ್ಳುವುದು ಒಪ್ಪಂದದಲ್ಲಿ ಸೇರಿವೆ.

ಗೃಹ ಕೌನ್ಸಿಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್‌ ಶೇಠ್‌, ಬಿಎಂಆರ್‌ಸಿಎಲ್‌ ಮುಖ್ಯ ವಾಸ್ತು ಶಿಲ್ಪಿ ಆಶಿಶ್‌ ಕಪೂರ್‌ ಒಪ್ಪಂದಕ್ಕೆ ಸಹಿ ಹಾಕಿದರು. ಬಿಎಂಆರ್‌ಸಿಎಲ್‌ ಯೋಜನಾ ನಿರ್ದೇಶಕ ಡಿ. ರಾಧಾಕೃಷ್ಣ ರೆಡ್ಡಿ, ಸಿವಿಲ್‌ ಸಲಹೆಗಾರ ಅಭಯ್‌ ಕುಮಾರ್ ರೈ, ಗೃಹ ಕೌನ್ಸಿಲ್‌ ಡೆಪ್ಯುಟಿ ಸಿಇಒ ಶಬ್ನಮ್‌ ಬಸ್ಸಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT