ಮಂಗಳವಾರ, ಮಾರ್ಚ್ 2, 2021
19 °C

ಬಸ್‌ ಕವಚ ನಿರ್ಮಾಣಕ್ಕೆ ಹೊರಗುತ್ತಿಗೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಎಂಟಿಸಿ ಹೊಸದಾಗಿ 643 ಬಸ್‌ಗಳನ್ನು ಖರೀದಿಸುತ್ತಿದ್ದು, ಅವುಗಳ ಕವಚ ನಿರ್ಮಾಣಕ್ಕೆ ಹೊರಗುತ್ತಿಗೆ ನೀಡುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಆರೋಪಿಸಿದೆ.

ಬೆಂಗಳೂರಿನಲ್ಲೇ ಪ್ರಾದೇಶಿಕ ಕಾರ್ಯಾಗಾರ ಇದ್ದು, ಇತರೆ ವಿಭಾಗಗಳಿಂದ ಬಸ್‌ಗಳನ್ನು ತರಿಸಿಕೊಂಡು ದುರಸ್ತಿ ಮಾಡಲಾಗುತ್ತಿದೆ. ಸದ್ಯ ಬಂದಿರುವ ಮಾಹಿತಿ ಪ್ರಕಾರ 643 ಹೊಸ ಚಾಸಿಗಳನ್ನು ಖರೀದಿಸಲಾಗುತ್ತಿದೆ. ಅವುಗಳಿಗೆ ಕವಚ ನಿರ್ಮಾಣ ಮಾಡಲು ಟೆಂಡರ್ ಮೂಲಕ ಹೊರ ಗುತ್ತಿಗೆ ನೀಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.

‘ನಮ್ಮದೇ ಸುಸಜ್ಜಿತ ಕಾರ್ಯಾಗಾರ ಮತ್ತು ಪ್ರತಿಭಾವಂತ ಕಾರ್ಮಿಕರಿದ್ದಾರೆ. ಅವರಿಗೆ ಸಂಪೂರ್ಣ ಕೆಲಸ ಕೊಡಲು ಸಾಧ್ಯವಾಗದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯ ಭಾಗವಾಗಿರುವ ಬಿಎಂಟಿಸಿ ಈಗ ಕವಚ ನಿರ್ಮಾಣಕ್ಕೆ ಹೊರಗುತ್ತಿಗೆ ನೀಡುವುದು ಸರಿಯಲ್ಲ. ಕೆಎಸ್‌ಆರ್‌ಟಿಸಿ ಪ್ರಾದೇಶಿಕ ಕಾರ್ಯಾಗಾರವನ್ನೇ ಬಳಸಿಕೊಳ್ಳಬೇಕು. ಅಲ್ಲಿನ ಕಾರ್ಮಿಕರಿಗೆ ಕೆಲಸ ಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ಅಧಿಕಾರಿಗಳು, ‘ಬಸ್‌ಗಳ ಚಾಸಿ ಖರೀದಿ ಮಾಡುತ್ತಿಲ್ಲ. ಕವಚ ಸೇರಿ ಪರಿಪೂರ್ಣವಾಗಿ ನಿರ್ಮಾಣಗೊಂಡಿರುವ ಬಸ್‌ಗಳನ್ನೇ ಖರೀದಿ ಮಾಡಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು