ಬೆಂಗಳೂರು: ದೆಹಲಿಯಿಂದ ಹಾಸನಕ್ಕೆ ತಲುಪಿಸಬೇಕಾಗಿದ್ದ ಉಡುಗೊರೆ ಪೆಟ್ಟಿಗೆಯನ್ನು ಪ್ರಯಾಣಿಕರೊಬ್ಬರು ನಗರದಲ್ಲಿ ಕಳೆದುಕೊಂಡಿದ್ದರು. ಆದರೆ, ಬಿಎಂಟಿಸಿ ನಿರ್ವಾಹಕರ ಕಾಳಜಿಯಿಂದಾಗಿ ಎರಡೇ ದಿನದಲ್ಲಿ ಉಡುಗೊರೆ ಪತ್ತೆಯಾಗಿದ್ದು ಅದನ್ನು ಮರಳಿ ಪ್ರಯಾಣಿಕನಿಗೆ ತಲುಪಿಸಲಾಗಿದೆ.

ಹಾಸನದ ಡಾ.ಎಚ್.ಆರ್.ಸಂಯಮಿ ಲೆಕ್ಕೆಕಟ್ಟೆ ನಾಲ್ಕು ದಿನದ ಹಿಂದೆ ದೆಹಲಿಗೆ ಹೋಗಿದ್ದರು. ಪರಿಚಯಸ್ಥರೊಬ್ಬರು ಹಾಸನದ ಸ್ನೇಹಿತರಿಗೆ ಉಡುಗೊರೆ ರೂಪದಲ್ಲಿ ಮನೆ ಸ್ವಚ್ಛತೆಯ ರೊಬೊಟ್ ಯಂತ್ರ ತಲುಪಿಸಲು ಸಂಯಮಿ ಅವರಿಗೆ ನೀಡಿದ್ದರು.

ವಿಮಾನದಲ್ಲಿ ಬಂದಿಳಿದ ಅವರು ವಾಯುವಜ್ರ ಬಸ್ನಲ್ಲಿ ರಾಜಾಜಿನಗರ ನಿಲ್ದಾಣ ತಲುಪಿ, ಅಲ್ಲಿಂದ ಹಾಸನ ಬಸ್ ಹತ್ತಿದ್ದರು. ಸ್ವಲ್ಪ ದೂರ ಹೋದ ಮೇಲೆ ಅವರಿಗೆ ಉಡುಗೊರೆ ಮರೆತಿರುವುದು ನೆನಪಾಯಿತು. ಎಲ್ಲಿ ಬಿಟ್ಟಿದ್ದೇನೆ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಇದಕ್ಕಾಗಿ ಅವರು ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಇ–ಮೇಲ್ ಮೂಲಕ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಸಂಯಮಿ ಮತ್ತೆ ದೆಹಲಿಗೆ ಹೋಗುವ ಸನ್ನಿವೇಶ ಎದುರಾಯಿತು. ನಗರದಲ್ಲಿ ವಾಯುವಜ್ರ ಬಸ್ ಹತ್ತಿ ವಿಮಾನ ನಿಲ್ದಾಣಕ್ಕೆ ಹೋಗುವಾಗ ನಿರ್ವಾಹಕ ಪರಮೇಶ್ವರ್ ಅವರೊಂದಿಗೆ ಉಡುಗೊರೆ ಬಾಕ್ಸ್ ವಿಷಯ ಚರ್ಚಿಸಿದ್ದರು.

ವಿವರ ಪಡೆದ ಪರಮೇಶ್ವರ್ ಮಾಹಿತಿ ಹಂಚಿಕೊಂಡ ಕೆಲವೇ ನಿಮಿಷದಲ್ಲಿ ಬಾಕ್ಸ್ ಪತ್ತೆಯಾಗಿ ಫೋಟೊ ಸಿಕ್ಕಿತ್ತು. ಸಂಯಮಿ ಅವರು ಕತ್ರಿಗುಪ್ಪೆ ಡಿಪೊಗೆ ಸೇರಿದ ಕೆಐಎ 10/10 ಬಸ್ನಲ್ಲಿ ಬಾಕ್ಸ್ ಬಿಟ್ಟು ಹೋಗಿದ್ದು, ಅದು ಅಲ್ಲಿನ ಭದ್ರತಾ ಶಾಖೆಯಲ್ಲಿ ಇರುವುದು ಖಚಿತವಾಗಿತ್ತು.

‘ಉಡುಗೊರೆ ಕಳೆದುಹೋದಾಗ ಬೇಸರವಾಯಿತು. ವಿಮಾನ ನಿಲ್ದಾಣದಲ್ಲಿ ದೂರು ನೀಡಿದರೂ ಪ್ರತಿಕ್ರಿಯೆ ಬರಲಿಲ್ಲ. ಬಿಎಂಟಿಸಿ ಬಸ್ನಲ್ಲಿ ಬಿಟ್ಟಿದ್ದರೂ ಸಿಗುವುದು ಅನುಮಾನ ಎಂದು ಸುಮ್ಮನಾಗಿದ್ದೆ. ವಿಷಯ ತಿಳಿದ ಎರಡೇ ದಿನದಲ್ಲಿ ಪತ್ತೆಹಚ್ಚಿದ ಬಿಎಂಟಿಸಿ ಕಾರ್ಯವೈಖರಿ ಬಗ್ಗೆ ಹೆಮ್ಮೆ ಎನಿಸಿತು’ ಎಂದು ಸಂಯಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರು ವಸ್ತುಗಳನ್ನು ಮರೆತು ಹೋದರೆ ಡಿಪೊದ ಭದ್ರತಾ ಶಾಖೆಗೆ ಸಿಬ್ಬಂದಿ ತಲುಪಿಸುತ್ತಾರೆ. ಕಳೆದುಕೊಂಡವರು ವಿವರ ಇಟ್ಟುಕೊಂಡಿದ್ದರೆ ಹಿಂದಿರುಗಿಸಲಾಗುತ್ತದೆ. ದಿನಕ್ಕೆ 10 ರಿಂದ 15 ವಸ್ತುಗಳು ಕಾಣೆಯಾದ ಪ್ರಕರಣಗಳು ವರದಿಯಾಗುತ್ತಿವೆ’ ಎಂದು ಬಿಎಂಟಿಸಿ ವಿಮಾನ ನಿಲ್ದಾಣ ಡಿಪೊದ ಸಹಾಯಕ ಸಂಚಾರ ವ್ಯವಸ್ಥಾಪಕ ರಾಮಪ್ಪ ತಿಳಿಸಿದರು.

ಲಗೇಜ್ ಮರೆತಿದ್ದರೆ ಕರೆ ಮಾಡಿ...

ಬಿಎಂಟಿಸಿ ಬಸ್ನಲ್ಲಿ ವಸ್ತುಗಳನ್ನು ಬಿಟ್ಟು ಹೋಗಿದ್ದರೆ ಆತಂಕ ಬೇಡ. ಬಿಎಂಟಿಸಿಯ ಡಿಪೊಗಳಲ್ಲಿ ಸುರಕ್ಷಿತವಾಗಿಟ್ಟುಕೊಂಡು ಕರೆ ಮಾಡಿದವರಿಗೆ ಹಸ್ತಾಂತರಿಸಲಾಗುತ್ತದೆ. ಇದಕ್ಕಾಗಿ ಕೌಂಟರ್ ಅನ್ನು ಸ್ಥಾಪಿಸಲಾಗಿದ್ದು 7760991269ಕ್ಕೆ ಕರೆ ಮಾಡಿದರೆ ನಿಖರ ಮಾಹಿತಿ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.