ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರಿಗೆ ಬುಕ್‌ ಬ್ರಹ್ಮ ಕಾದಂಬರಿ ಪುರಸ್ಕಾರ

ಕಥಾ ಸ್ಪರ್ಧೆಯಲ್ಲಿ ಇಂದ್ರಕುಮಾರ್‌ರ ‘ಇರದ ಇರುವಿನ ತಾವು’ ಕಥೆ ಪ್ರಥಮ
Published 16 ಆಗಸ್ಟ್ 2023, 2:12 IST
Last Updated 16 ಆಗಸ್ಟ್ 2023, 2:12 IST
ಅಕ್ಷರ ಗಾತ್ರ

ಬೆಂಗಳೂರು: ಬುಕ್‌ ಬ್ರಹ್ಮ ಸಂಸ್ಥೆಯು ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕಾದಂಬರಿ ಪುರಸ್ಕಾರದಲ್ಲಿ ಎಂ.ಆರ್. ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಹಾಗೂ ಕಥಾ ಸ್ಪರ್ಧೆಯಲ್ಲಿ ಇಂದ್ರಕುಮಾರ್ ಎಚ್‌.ಬಿ. ಅವರ ‘ಇರದ ಇರುವಿನ ತಾವು’ ಕಥೆ ಪ್ರಥಮ ಸ್ಥಾನ ಪಡೆದವು.

ಕಾದಂಬರಿ ಪುರಸ್ಕಾರವು ₹ 1 ಲಕ್ಷ ನಗದು ಒಳಗೊಂಡಿದೆ. ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. ಆಯ್ಕೆಯಾದ ಕೃತಿಯ ಲೇಖಕರಿಗೆ ₹ 75 ಸಾವಿರ ಹಾಗೂ ಪ್ರಕಾಶಕರಿಗೆ ₹ 25 ಸಾವಿರ ನಗದು ನೀಡಲಾಯಿತು. ಕಥಾ ಸ್ಪರ್ಧೆಯ ಪ್ರಥಮ ಬಹುಮಾನವು ₹ 50 ಸಾವಿರ ನಗದು ಒಳಗೊಂಡಿದೆ. 

ಕಥಾ ಸ್ಪರ್ಧೆಯ ಅಂತಿಮ ಸುತ್ತಿಗೆ 25 ಕಥೆಗಳು ಆಯ್ಕೆಯಾಗಿದ್ದವು. ಅಕ್ಷಯ ಪಂಡಿತ್ ಅವರ ‘ಖಾಲಿ ಕ್ಯಾನ್ವಸ್’ ಕಥೆ ದ್ವಿತೀಯ (₹ 25 ಸಾವಿರ ನಗದು) ಹಾಗೂ ವಿಕಾಸ್ ನೇಗಿಲೋಣಿ ಅವರ ‘ರುಕುಮಣಿ ರುಕುಮಣಿ ಶಾದಿ ಕೆ ಬಾದ್ ಕ್ಯಾ ಕ್ಯಾ ಹುವಾ’ ಕಥೆ ತೃತೀಯ ಸ್ಥಾನ (₹ 15 ಸಾವಿರ ನಗದು) ಪಡೆಯಿತು. ಶರತ್ ಭಟ್ ಸೇರಾಜೆ ಅವರ ‘3>2>1’, ಪೂರ್ಣಿಮಾ ಭಟ್ಟ ಅವರ ‘ಹಾಪ್‌ ಸರ್ಕಲ್ + ಹಾಪ್‌ ಸರ್ಕಲ್’, ಜಯರಾಮಚಾರಿ ಅವರ ‘ಯುಗಾದಿ ವಿಶೇಷಾಂಕ’, ದೀಪ್ತಿ ಭದ್ರಾವತಿ ಅವರ ‘ಸತ್ಯವೇಲು ಮತ್ತವನ ಸೊಳ್ಳೆ ಪುರಾಣ’ ಹಾಗೂ ವಿಜಯಶ್ರೀ ಎಂ. ಹಾಲಾಡಿ ಅವರ ‘ಉಮ್ಕಲ್ತಿ ಗುಡಿಯ ಸಾಕ್ಷಿಯಲ್ಲಿ’ ಕಥೆಗಳು ಸಮಾಧಾನಕರ ಬಹುಮಾನ (ತಲಾ ₹ 5 ಸಾವಿರ ನಗದು) ಪಡೆದವು. 

ಕಾದಂಬರಿ ಪುರಸ್ಕಾರದ ಅಂತಿಮ ಸುತ್ತಿನಲ್ಲಿ ಐದು ಕಾದಂಬರಿಗಳಿದ್ದವು. ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’, ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’, ಕಾ.ತ. ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಹಾಗೂ ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ ಕಾದಂಬರಿ ಮೆಚ್ಚುಗೆ ಬಹುಮಾನ (ತಲಾ ₹ 5 ಸಾವಿರ ನಗದು) ಪಡೆದವು. 

ಇಂದ್ರಕುಮಾರ್‌ ಎಚ್‌.ಬಿ.
ಇಂದ್ರಕುಮಾರ್‌ ಎಚ್‌.ಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT