‘ಸಂತಾನ ಬೇಡವಾದರೆ ಸನ್ಯಾಸಿಯಾಗಿ’
‘ಯಾವುದೋ ಸಣ್ಣ ಸಣ್ಣ ಲಾಭಗಳಿಗಾಗಿ ಸಂತಾನದ ಬಗ್ಗೆ ಬ್ರಾಹ್ಮಣ ಸಮುದಾಯದವರು ನಿರುತ್ಸಾಹ ತೋರುತ್ತಿದ್ದಾರೆ. ಸಂತಾನ ಬೇಡವಾದರೆ ಸಂಸಾರ ನಡೆಸದೆ ಸಮಾಜದ ಕಲ್ಯಾಣಕ್ಕಾಗಿ ಸನ್ಯಾಸ ದೀಕ್ಷೆ ಪಡೆಯಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಸಮ್ಮೇಳನದಲ್ಲಿ ಆಶೀರ್ವಚನ ನೀಡಿದ ಅವರು ‘ಸಂತಾನ ಪಡೆಯದಿರುವುದು ಮತ್ತು ಸಂಸ್ಕಾರ ಹೀನತೆ ಬ್ರಾಹ್ಮಣ ಸಮುದಾಯದ ಪ್ರಮುಖ ಸಮಸ್ಯೆಗಳಾಗಿವೆ. ಸದ್ಯದ ಸ್ಥಿತಿಯಲ್ಲಿ ಸಂತಾನ ಸಂಸ್ಕಾರವನ್ನು ವೃದ್ಧಿಸಬೇಕಾದ ಅಗತ್ಯವಿದೆ. ಸಂಸಾರಸ್ಥರು ಸಂತತಿ ಪಡೆದು ಸಮುದಾಯವನ್ನು ಬೆಳೆಸಬೇಕು. ಪಡೆದ ಸಂತತಿಗೆ ಸಂಸ್ಕಾರವನ್ನೂ ನೀಡಬೇಕು. ಸಂತಾನ ಬೇಡವೆಂದಾದಲ್ಲಿ ಸಂಸಾರವೂ ಬೇಡ’ ಎಂದು ಹೇಳಿದರು. ‘ಬ್ರಾಹ್ಮಣರಲ್ಲಿ ಯಾರೇ ಹೆಚ್ಚಿನ ಸಂತತಿ ಪಡೆದರೂ ಅವರ ಮಕ್ಕಳಿಗೆ ಆಶೀರ್ವಾದ ಆಶ್ರಯವನ್ನು ಮಠ ನೀಡಲಿದೆ. ಶಿಕ್ಷಣ ಉದ್ಯೋಗಕ್ಕೂ ನೆರವಾಗುತ್ತದೆ’ ಎಂದರು.