ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ ಠಾಣೆ ಮೇಲೆ ಲೋಕಾಯುಕ್ತ ದಾಳಿ: ಲಂಚ ಪಡೆಯುತ್ತಿದ್ದ ಕಾನ್‌ಸ್ಟೆಬಲ್ ಬಂಧನ

Published 21 ಅಕ್ಟೋಬರ್ 2023, 15:42 IST
Last Updated 21 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರ ‍ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ₹ 50 ಸಾವಿರ ಲಂಚ ಪಡೆಯುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ ಆಂಜನೇಯ ಅವರನ್ನು ಬಂಧಿಸಿದ್ದಾರೆ.

‘ಹಲ್ಲೆ ಪ್ರಕರಣದಲ್ಲಿ ಬಿ–ರಿಪೋರ್ಟ್ ಸಲ್ಲಿಸಲು ₹ 50 ಸಾವಿರ ಲಂಚಕ್ಕೆ ಠಾಣೆಯ ಪೊಲೀಸರು ಬೇಡಿಕೆ ಇರಿಸಿದ್ದರು. ಈ ಸಂಬಂಧ ಸಲ್ಲಿಕೆಯಾದ ದೂರು ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು. ಲಂಚ ಪಡೆಯುವಾಗಲೇ ಠಾಣೆಯ ಬರಹಗಾರನೂ ಆಗಿದ್ದ ಹೆಡ್‌ ಕಾನ್‌ಸ್ಟೆಬಲ್‌ ಆಂಜನೇಯ ಸಿಕ್ಕಿಬಿದ್ದ’ ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.

‘ಕಾರಿನ ವಿಚಾರವಾಗಿ ಮಹಿಳೆ ಹಾಗೂ ಸಾಗರ್–ಅವರ ತಂದೆ ನಡುವೆ ಗಲಾಟೆ ಆಗಿತ್ತು. ಹಲ್ಲೆ ಆರೋಪದಡಿ ಸಾಗರ್–ತಂದೆ ವಿರುದ್ಧ ಮಹಿಳೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ‘ನ್ಯಾಯಾಲಯಕ್ಕೆ ಬಿ–ರಿಪೋರ್ಟ್ ಸಲ್ಲಿಸಲಾಗುವುದು. ಇದಕ್ಕಾಗಿ ₹ 50 ಸಾವಿರ ಲಂಚ ನೀಡಬೇಕು’ ಎಂದು ಬೇಡಿಕೆ ಇರಿಸಿದ್ದರು. ಲಂಚದ ಸಂಬಂಧ ಸಾಗರ್ ದೂರು ನೀಡಿದ್ದರು.’

‘ಸಾಗರ್ ಅವರಿಂದ ಹೆಡ್‌ ಕಾನ್‌ಸ್ಟೆಬಲ್ ಆಂಜನೇಯ ₹ 50 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಲಂಚದ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಲಕ್ಷ್ಮಣ್ ಗೌಡ ಹಾಗೂ ಪಿಎಸ್‌ಐ ಮಾರುತಿ ಪಾತ್ರವೂ ಇದೆ. ದಾಳಿ ಮಾಡುತ್ತಿದ್ದಂತೆ ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT