ಭಾನುವಾರ, ಜನವರಿ 26, 2020
31 °C
ಬ್ರಿಟಿಷ್ ಏರ್‌ವೇಸ್‌ನಿಂದ ಪ್ರತಿನಿತ್ಯ ಸಂಚಾರ

ಕೆಐಎಎಲ್‌ನಿಂದ ಲಂಡನ್‌ಗೆ ವಿಮಾನ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್‌) ಲಂಡನ್‌ಗೆ ಬ್ರಿಟಿಷ್ ಏರ್‌ವೇಸ್‌ನ ಎ350 ಮೊದಲ ವಿಮಾನದ ಹಾರಾಟಕ್ಕೆ ಚಾಲನೆ ಸಿಕ್ಕಿದೆ. 

ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಗೆ ಕೆಐಎಎಲ್‌ಯಿಂದ ವಿಮಾನ ಕಾರ್ಯಾಚರಣೆ ನಡೆಸಲಿದೆ. ಬ್ರಿಟಿಷ್ ಏರ್‌ವೇಸ್‌ನ ಏಷ್ಯಾ ಪೆಸಿಫಿಕ್‍ನ ಮಾರಾಟ ವಿಭಾಗದ ಮುಖ್ಯಸ್ಥ ಮೋರನ್ ಬರ್ಜರ್ ಗುರುವಾರ ಇಲ್ಲಿ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಲಬ್ ಸೂಟ್‌ ಮತ್ತು ಬಿಸಿನೆಸ್ ಕ್ಯಾಬಿನ್ ಇರುವ`ಹಷ್ಲಿನರ್’ ಹೆಸರಿನ ವಿಮಾನ ಪರಿಚಯಿಸಲಾಗುತ್ತಿದೆ. ಈ ವಿಮಾನದಲ್ಲಿ ಪ್ರತ್ಯೇಕ ಕೋಣೆ, ಖಾಸಗಿತನ ನೀಡುವ ವಿಶಾಲವಾದ ಸೀಟುಗಳು, ವೈ–ಫೈ, ಮನೋರಂಜನಾ ಪರದೆ ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು