ಬೆಂಗಳೂರು: ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಅಬಕಾರಿ ಉಪ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ರಾಜ್ಯ ಅಬಕಾರಿ ಆಯುಕ್ತ ವಿ.ಯಶವಂತ್ ಮಂಗಳವಾರ ಉದ್ಘಾಟಿಸಿದರು.

ಅಬಕಾರಿ ಜಂಟಿ ಆಯುಕ್ತರ ಕಚೇರಿ ಈವರೆಗೂ ಜೆ.ಸಿ.ರಸ್ತೆಯ ಪೂರ್ಣಿಮಾ ಕಾಂಪ್ಲೆಕ್ಸ್‌ನ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಮೈಸೂರು ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ (ಕೆಎಸ್‌ಬಿಸಿಎಲ್) ಸಂಸ್ಥೆ ನಿರ್ಮಿಸಿದೆ.ನೆಲ ಮಹಡಿಯಲ್ಲಿ ಅಬಕಾರಿ ಜಂಟಿ ಆಯುಕ್ತರ ಕಚೇರಿ (ಜಾರಿ ಮತ್ತು ತನಿಖೆ) ಬೆಂಗಳೂರು ವಿಭಾಗ,ವಿಜಯನಗರ ಇಐಬಿ-2 ಅಬಕಾರಿ ಅಧೀಕ್ಷರ ಕಚೇರಿ,ಗಾಂಧಿನಗರ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ ಹಾಗೂಚಿಕ್ಕಪೇಟೆ ಅಬಕಾರಿ ನಿರೀಕ್ಷಕರ ಕಚೇರಿ ಇದೆ.

ಎರಡನೇ ಮಹಡಿಯಲ್ಲಿಬೆಂಗಳೂರುಪಶ್ಚಿಮ ಅಬಕಾರಿ ಉಪ ಆಯುಕ್ತರ ಕಚೇರಿ,ಹನುಮಂತನಗರ ಹಾಗೂ ಚಾಮರಾಜಪೇಟೆ ವಲಯಗಳಅಬಕಾರಿ ನಿರೀಕ್ಷಕರ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತ ಬಿ.ಆರ್.ಹಿರೇಮಠ್ ತಿಳಿಸಿದರು.

ಅಬಕಾರಿ ಜಂಟಿ ಆಯುಕ್ತ ಎಲ್.ನಾಗೇಶ್, ಅಪರ ಆಯುಕ್ತ (ಅಪರಾಧ) ವೆಂಕಟರಾಜು, ಕೆಎಸ್ಇಎಸ್ ಅಪರ ಆಯುಕ್ತ ಎಸ್.ಎಲ್.ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.