ಮೆಟ್ರೊ ಗುಂಪು ಪ್ರಯಾಣಕ್ಕೆ ಶೇ 20ರಷ್ಟು ರಿಯಾಯಿತಿ

ಬೆಂಗಳೂರು: ಒಂದು ಸಾವಿರಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಗುಂಪು ಪ್ರಯಾಣ ಮಾಡಿದರೆ ಶೇ 20ರವರೆಗೆ ರಿಯಾಯಿತಿ ನೀಡುವ ಕೊಡುಗೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಪ್ರಕಟಿಸಿದೆ.
ಜನವರಿ 1ರಿಂದ ಮಧ್ಯಮ ಮತ್ತು ದೊಡ್ಡ ಗುಂಪುಗಳಿಗೆ ವಿವಿಧ ರಿಯಾಯಿತಿ ನೀಡಲು ಮುಂದಾಗಿದೆ. ಮಧ್ಯಮ ಗುಂಪು(100ರಿಂದ 1 ಸಾವಿರ ಜನ) ಒಟ್ಟಾಗಿ ಪ್ರಯಾಣಿಸಿದರೆ ಟೋಕನ್ ದರದಲ್ಲಿ ಶೇ 15ರಷ್ಟು ರಿಯಾಯಿತಿ ದೊರೆಯಲಿದೆ. ಪ್ರಯಾಣಿಕರು ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ, ಎಲ್ಲರೂ ಒಂದೇ ನಿಲ್ದಾಣದಲ್ಲಿ ಇಳಿಯಬೇಕು.
ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಿದರೆ ಅಥವಾ ವಿವಿಧ ನಿಲ್ದಾಣಗಳಲ್ಲಿ ಪ್ರವೇಶಿಸಿ ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಫ್ಲಾಟ್ ದರ ₹35 ದೊರೆಯಲಿದೆ.
ದೊಡ್ಡ ಗುಂಪು(1 ಸಾವಿರಕ್ಕಿಂತ ಹೆಚ್ಚು ಜನ) ಒಂದೇ ನಿಲ್ದಾಣದಿಂದ ಪ್ರವೇಶಿಸಿ ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಟೋಕನ್ ದರದಲ್ಲಿ ಶೇ 20ರಷ್ಟು ರಿಯಾಯಿತಿ ದೊರೆಯಲಿದೆ. ಈ ಗುಂಪು ಒಂದೇ ನಿಲ್ದಾಣದಲ್ಲಿ ಪ್ರವೇಶಿಸಿ ವಿವಿಧ ನಿಲ್ದಾಣಗಳಲ್ಲಿ ನಿರ್ಗಮಿಸಿದರೆ ಅಥವಾ ವಿವಿಧ ನಿಲ್ದಾಣಗಳಲ್ಲಿ ಪ್ರವೇಶಿಸಿ ಒಂದೇ ನಿಲ್ದಾಣದಲ್ಲಿ ನಿರ್ಗಮಿಸಿದರೆ ಫ್ಲಾಟ್ ದರ ₹30 ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಗುಂಪು ಪ್ರಯಾಣಿಕರು ಪ್ರಯಾಣದ ದಿನಾಂಕ, ಸಮಯ, ಪ್ರಯಾಣಿಕರ ಸಂಖ್ಯೆ, ಪ್ರವೇಶ ಮತ್ತು ನಿರ್ಗಮನ ನಿಲ್ದಾಣ, ಪ್ರಯಾಣದ ಉದ್ದೇಶ ತಿಳಿಸಿ ಕನಿಷ್ಠ 7 ದಿನ ಮುಂಚಿತವಾಗಿ ಗುಂಪು ಟಿಕೆಟ್ ಪಡೆಯಬಹುದು ಎಂದು ವಿವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.